Banner Ad

ಸುದ್ದಿ ಕನ್ನಡ ವಾರ್ತೆ

ಜಾತ್ಯಾತೀತ ಜನತಾ ದಳದ ಜೊಯಿಡಾ ತಾಲೂಕಾ ಕಾರ್ಯಕರ್ತರ ಸಭೆಯನ್ನು ಸೋಮವಾರ ದಿನಾಂಕ 23 ರಂದು ಜೊಯಿಡಾ ದಲ್ಲಿ ಕರೆಯಲಾಗಿದೆ. ಜೋಯಿಡಾ ದ ಸಂತ್ರಿ ಯಲ್ಲಿರುವ ರೆಸಾರ್ಟ್ ನಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು ಜಿಲ್ಲೆಯ ಧುರೀಣ ಸೂರಜ್ ನಾಯ್ಕ್ ಸೋನಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

Banner Ad

ದಾಂಡೇಲಿಯ ಜೆಡಿಎಸ್ ಪ್ರಮುಖರಾದ ರೋಷನ್ ಬಾವಾಜಿ ಮತ್ತು ಅಕ್ರಮ ಖಾನ್ ದಾಂಡೇಲಿ ತಾಲೂಕಾ ಅಧ್ಯಕ್ಷರು ಆಹ್ವಾನಿತ ರಾಗಿದ್ದಾರೆ. ಕಾರ್ಯಕರ್ತರ ಸಭೆ ಜೊಯಿಡಾ ದ ತಾಲೂಕಾ ಅಧ್ಯಕ್ಷ ಅಜಿತ್ ಥೋರವತ್ ಅವರ ನೇತೃತ್ವದಲ್ಲಿ ನಡೆಯಲಿದೆ. ಮುಂಬರುವ ಗ್ರಾಮ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯ ಅಂಗವಾಗಿ ಈ ಸಭೆ ನಡೆಯಲಿದೆ. ಎಂದು ಅಜಿತ್ ಥೋರವತ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Banner Ad