ಸುದ್ದಿ ಕನ್ನಡ ವಾರ್ತೆ
ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತರಾಮ್ ಸಿದ್ದಿ ಅವರು ಭಾರತೀಯ ಜನತಾ ಪಾರ್ಟಿಯ ಎಸ್ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿ ನೇಮಕಗೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಅಡವಿಮಕ್ಕಳ ಧ್ವನಿಯಾಗಿ, ಸರಳತೆಯ ಸಾಕಾರಮೂರ್ತಿಯಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಅವರು ಕೈಗೊಂಡ ನಿಸ್ವಾರ್ಥ ಸೇವೆಗೆ ಸಂದಿರುವ ಅತ್ಯಂತ ಅರ್ಹವಾದ ಗೌರವವಿದು. ಪಕ್ಷದ ಸಿದ್ಧಾಂತದ ಮೇಲೆ ಅಚಲ ನಂಬಿಕೆಯನ್ನಿಟ್ಟು, ಅಧಿಕಾರವನ್ನು ಕೇವಲ ಸೇವೆಯ ಸಾಧನವನ್ನಾಗಿ ಬಳಸಿಕೊಂಡ ಅವರ ನಡೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ತಳಮಟ್ಟದ ಜನರ ನೋವಿಗೆ ಮಿಡಿಯುತ್ತಾ, ಸಂಘಟನಾ ಚತುರತೆಯ ಮೂಲಕ ಪಕ್ಷವನ್ನು ಬಲಪಡಿಸಿದ ಅವರ ಶ್ರಮಕ್ಕೆ ಇಂದು ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ.
ಅವರ ಸಮರ್ಥ ನೇತೃತ್ವದಲ್ಲಿ ಪಕ್ಷವು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಸದೃಢವಾಗಿ ಬೆಳೆಯಲಿ ಹಾಗೂ ಮುಂಬರುವ ದಿನಗಳಲ್ಲಿ ಅವರು ಇನ್ನೂ ಉನ್ನತ ಜವಾಬ್ದಾರಿಗಳನ್ನು ಅಲಂಕರಿಸುವಂತಾಗಲಿ ಎಂದು ಆಶಿಸುತ್ತೇನೆ. ಜನಪರ ಕಾಳಜಿಯ ಅವರ ಈ ಯಶಸ್ವಿ ಪಯಣ ನಿರಂತರವಾಗಿ ಸಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಅವರಿಗೆ ಶುಭ ಕೋರುತ್ತೇನೆ.
ಶುಭ ಹಾರೈಕೆಗಳೊಂದಿಗೆ,
ವಿಶ್ವೇಶ್ವರ ಹೆಗಡೆ ಕಾಗೇರಿ
ಸಂಸದರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ
