ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಅಮದಳ್ಳಿ ಯಲ್ಲಿರುವ ಶ್ರೀ ಬಾಲವೀರಗಣಪತಿ ಕ್ಷೇತ್ರ ಸಂಸ್ಥಾನದ 42ನೇ ವಾರ್ಷಿಕ ಮಹೋತ್ಸವವು ಅಕ್ಷಯ ತೃತೀಯ ಪ್ರಯುಕ್ತ ಎಪ್ರಿಲ್ 19 ಮತ್ತು 20, 2026ರಂದು ವಿಜೃಂಭಣೆಯಿಂದ ಜರುಗಲಿದೆ.
ಎಪ್ರಿಲ್ 19ರಂದು ಬೆಳಗ್ಗೆ 10:45ಕ್ಕೆ ಸಾಮೂಹಿಕ ಸತ್ಯಗಣಪತಿ ವ್ರತ ನಡೆಯಲಿದೆ.
ಎಪ್ರಿಲ್ 20ರಂದು ಅಕ್ಷಯ ತೃತೀಯದಂದು ಮುಂಜಾನೆ 5:30ರಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ದಿನಪೂರ್ತಿ ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಬೆಳಗ್ಗೆ 9:30ರಿಂದ 11:30ರವರೆಗೆ, ಮಧ್ಯಾಹ್ನ 12ರಿಂದ 1:30ರವರೆಗೆ ಹಾಗೂ ಅಪರಾಹ್ನ 2ರಿಂದ 6ರವರೆಗೆ ವಿವಿಧ ಪೂಜಾ ವಿಧಿಗಳು ನಡೆಯಲಿವೆ. ಸಂಜೆ 7:30ರಿಂದ 8:30ರವರೆಗೆ ರಂಗಪೂಜೆ ಮತ್ತು ದೀಪೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಸೇವೆಯನ್ನು ಮಡಗಾಂವ (ಗೋವಾ) ಮೂಲದ ಇಚ್ಚಿತ್ ಗುರುದಾಸ್ ತಳಾವಳಕರ ಅವರು ಸತತ 20ನೇ ವರ್ಷವೂ ನಿರ್ವಹಿಸುತ್ತಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಬಾಲವೀರ ಗಣಪತಿ ಕ್ಷೇತ್ರ ಸಂಸ್ಥಾನ ಆಡಳಿತ ಮಂಡಳಿ ಈ ಮೂಲಕ ವಿನಂತಿಸಿದೆ.
