ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಮಾರ್ಚ 2026 ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಿ.ಜಿ.ವಿ.ಎಸ್ ಪದವಿ ಪೂರ್ವ ಕಾಲೇಜು ರಾಮನಗರದ ಈ ಕಾಲೇಜಿನಲ್ಲಿ ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ.
ಕಾಲೇಜಿನ ಒಟ್ಟು ಫಲಿತಾಂಶ 86% ಆಗಿದ್ದು . ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ: ಯಾಸ್ಮೀನ ಏಮ್.ಶೇಖ್ – 584 ಅಂಕ 97.33%, ದ್ವಿತೀಯ ಸ್ಥಾನ: ಪೂಜಾ ಎಸ್.ದೇಸಾಯಿ- 559 ಅಂಕ 93.17%. ತೃತೀಯ ಸ್ಥಾನ : ಶ್ವೇತಾ ಪಿ ಎಡಗೆ – 556 ಅಂಕ 92.67% ಪಡೆದಿರುತ್ತಾರೆ ಅದೇ ರೀತಿ ಕಲಾ ವಿಭಾಗದಲ್ಲಿ -ಪ್ರಥಮ ಸ್ಥಾನ :ಇಟಾ ಲಕ್ಷ್ಮಣ ಮಿರಾಶಿ – 553 ಅಂಕ -92.17%,
ದ್ವಿತೀಯ ಸ್ಥಾನ – ಸಂಜೀವಿನಿ ಎಸ್.ಹಣಬರ: 475 ಅಂಕ 79.17%. ತೃತೀಯ ಸ್ಥಾನ : ಕಾಮಾಕ್ಷಿ ಕೆ. ಪಾಟೀಲ್ – 457 ಅಂಕ 76.17%. ಪಡೆದಿರುತ್ತಾರೆ.
ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಮಂಜುನಾಥ ಪವಾರ್ ಕಾರ್ಯದರ್ಶಿ, ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಪ್ರೇಮಾನಂದ ಎಸ್.ಪರಬ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿದ್ದಾರೆ.
