ಸುದ್ದಿಕನ್ನಡ ವಾರ್ತೆ
Goa: ಓಲ್ಡಗೋವಾದಲ್ಲಿ ಫ್ಲಾಟ್‍ಗೆ ನುಗ್ಗಿ 3 ಸಾವಿರ ರೂ. ಕಳ್ಳತನ ಮಾಡಿದ ಪ್ರಕರಣದಲ್ಲಿ ಹಳೇ ಗೋವಾ ಪೊಲೀಸರು 100ಕ್ಕೂ ಹೆಚ್ಚು ಅಂತಾರಾಜ್ಯ ಅಪರಾಧದಲ್ಲಿ ತೊಡಗಿದ್ದ ನಟೋರಿಯಸ್ ಲೋಕೇಶ್ ರಾವ್ಸಾಹೇಬ್ ಸುತಾರ್ (30, ಮಿರಜ್, ಜಿಲ್ಲೆ- ಸಾಂಗ್ಲಿ) ಎಂಬಾತನನ್ನು ಬಂಧಿಸಿದ್ದಾರೆ. ಸುತಾರ್ ತನ್ನ ಏರಿಯಾದ ಎರಡು ಫ್ಲಾಟ್ ಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.(Notorious Lokesh Rawsaheb Sutar involved in more than 100 inter-state crimes).
ಓಲ್ಡ್ ಗೋವಾ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ- ಈ ಪ್ರಕರಣದಲ್ಲಿ ಸೀಮಾ ಸಿಂಗ್ ದೂರು ದಾಖಲಿಸಿದ್ದಾರೆ. ಅದರಂತೆ, ಬಿನಯ್ ಕುಮಾರ್ ಝಾ ಅವರ ಪಕ್ಕದ ಫ್ಲ್ಯಾಟ್ ನಲ್ಲಿ 27 ಸೆಪ್ಟೆಂಬರ್ 2024 ರಂದು ಕಳ್ಳತನ ನಡೆದಿದೆ. ಕಬೋರ್ಡ್ ನಲ್ಲಿಟ್ಟಿದ್ದ 3 ಸಾವಿರ ರೂ.ಗಳನ್ನು ಬಂಧಿತ ನಟೋರಿಯಸ್ ಕಳ್ಳ ಕಳ್ಳತನ ಮಾಡಿದ್ದಾನೆ. ದೂರಿನನ್ವಯ ಗೋವಾದ ಮಾಜಿ ಪೊಲೀಸ್ ಇನ್ಸ್‍ಪೆಕ್ಟರ್ ಸತೀಶ್ ಪಡವಾಲ್ಕರ್ ಮಾರ್ಗದರ್ಶನದಲ್ಲಿ ಮಹಿಳಾ ಸಬ್ ಇನ್ಸ್‍ಪೆಕ್ಟರ್ ಕರಿಷ್ಮಾ ಪ್ರಭು ಅವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಹಾಯದಿಂದ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇತರ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ, ಈ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಅಂತಾರಾಜ್ಯ ಕಳ್ಳತನದಲ್ಲಿ ಭಾಗಿಯಾಗಿರುವ ನಟೋರಿಯಸ್ ಲೋಕೇಶ್ ಸುತಾರ್ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ.
ಆತನ ಪತ್ತೆಗೆ ಪೊಲೀಸ್ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು. ಶಂಕಿತ ಆರೋಪಿ ಲೋಕೇಶ್ ಸುತಾರ್ ಎಂಬಾತ ಕವಠೆ-ಮಹಾಂಕಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾನೆ. ಲ್ಲಿನ ಸ್ಥಳೀಯ ಪೊಲೀಸರ ನೆರವಿನಿಂದ ಓಲ್ಡ ಗೋವಾ ಪೊಲೀಸರು ಸುತಾರ್ ನನ್ನು ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ.
ಅನುಮಾನಗೊಂಡ ಪೊಲೀಸರು ಲೋಕೇಶ್‍ನನ್ನು ವಿಚಾರಣೆಗೊಳಪಡಿಸಿದಾಗ ಓಲ್ಡಗೋವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೇರೆ ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ನ್ಯಾಯಾಲಯ ಬಂಧಿತ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.