ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ವಿಭೂತಿ ಪಾಲ್ಸ್ ನಲ್ಲಿ ಪ್ರವಾಸಕ್ಕೆ ಬಂದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ತೆಲಂಗಾಣ ರಾಜ್ಯದ ಅಜಯ್ ಶೀಲಾಮ್ (24) ಮೃತ ಯುವಕ. ಈತ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದ ವೇಳೆ ನೀರಿನಲ್ಲಿ ಇಳಿದಾಗ ಅಕಸ್ಮಾತ್ ಆಳಕ್ಕೆ ಜಾರಿದ ಪರಿಣಾಮ ಮುಳುಗಿದ್ದಾನೆ.

ಘಟನೆಯ ಸಮಯದಲ್ಲಿ ಅಲ್ಲಿ ಇದ್ದವರು ರಕ್ಷಣೆಗಾಗಿ ಪ್ರಯತ್ನಿಸಿದರೂ, ಅವರನ್ನು ತಕ್ಷಣವೇ ಮೇಲಕ್ಕೆ ತರಲು ಸಾಧ್ಯವಾಗಲಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಂಕೋಲಾ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ. ಕೆಲ ಸಮಯದ ಬಳಿಕ ಯುವಕನ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.