ಸುದ್ದಿ ಕನ್ನಡ ವಾರ್ತೆ
ಗೋವಾ ರಾಜ್ಯದ್ಯಂತ ಶ್ರೀ ಹನುಮಾನ ದೇವಸ್ಥಾನಗಳಲ್ಲಿ ಗುರುವಾರ ಹನುಮಾನ್ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಗೋವಾದ ಬಾನಸ್ತರಿ ಯ ಶ್ರೀ ಹನುಮಾನ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ 6:00ಗೆ ಶ್ರೀ ಹನುಮಾನ ಜನ್ಮೋತ್ಸವ ಆಚರಿಸಲಾಯಿತು. ವಿಶೇಷವಾಗಿ ಅಭಿಷೇಕ ಪೂಜೆ ನೆರವೇರಿಸಲಾಯಿತು. ಹನುಮಾನ ಜನ್ಮೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗೋಪಾಲ ಭಟ್ ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ವಿಶೇಷ ಭಜನಾ ಆರತಿ ಕಾರ್ಯಕ್ರಮ ನೆರವೇರಿತು.
