ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಶೇವಾಳಿ ಗ್ರಾಮದ ರೈತರ ತೋಟದಲ್ಲಿ ಬೆಳೆಯುತ್ತಿರುವ ಒಂದು ಅನಾನಸ್ ನಲ್ಲಿ 60 ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್ ಗಳು ಮೂಡಿಬರುತ್ತಾ ಆಶ್ಚರ್ಯ ತಂದಿದೆ,
ತಾಲೂಕಿನ ರೈತರಿಗೆ ಯಾವುದೇ ಬೆಳೆಗಳನ್ನು ರಕ್ಷಿಸಿ ಕೊಳ್ಳುವುದೇ ಒಂದು ಸಾಹಸ, ಅದರಲ್ಲೂ ಅನಾನಸ್ ಗಳಂತ ಬೆಳೆ ಗಳು ಚಿಕ್ಕದಾಗಿ ಮೂಡಿ ಬರುತ್ತಿದ್ದಂತೆ ಮಂಗ ಗಳು, ಕೆಂದಳಿಲು, ಹಂದಿಗಳು ಮತ್ತು ಹಾರುವ ಬೆಕ್ಕು ಗಳು ಮುರಿದು ತಿನ್ನುತ್ತವೆ, ಆದರೂ ಎಲ್ಲ ಪ್ರಾಣಿಗಳ ಕಣ್ಣು ತಪ್ಪಿಸಿ ಉಳಿದ ಈ ಅನಾನಸ್ ನಲ್ಲಿ ಆರಂಭ ದಲ್ಲಿ ಏನೂ ವಿಶೇಷತೆ ಕಂಡು ಬಂದಿರಲಿಲ್ಲ,
ದಿನ ಕಳೆದಂತೆ ಏನೋ ಬದಲಾವಣೆ ಕಂಡು ಬರತೊಡಗಿ ಮತ್ತೆ ಚಿಕ್ಕ ಚಿಕ್ಕ ಅನಾನಸ್ ಗಳು ಮೂಡಿ ಬಂದವು. ಈ ಚಿಕ್ಕ ಚಿಕ್ಕ ಅನಾನಸ್ ಗಳು ತಿನ್ನಲಿಕ್ಕೆ ಬರೋದಿಲ್ಲ ಚಿಕ್ಕ ಮಕ್ಕಳ ಆಟಿಗೆ ಯಂತೆ ಚಿಕ್ಕ ದಾಗಿವೆ, ಎಲ್ಲ ಅನಾನಸ್ ಗಳನ್ನು ಹೊತ್ತ ದೊಡ್ಡ ಅನಾನಸ್ ಗೆ ಸಿಹಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಗೊತ್ತಿಲ್ಲ, ಒಟ್ಟಾರೆ ತುಂಬಾ ಸೌಂದರ್ಯ ಹೊತ್ತಂತಿರುವ ಅನಾನಸ್ ನೋಡುವುದೇ ಒಂದು ಖುಷಿಯಾಗಿದೆ. ಈ ಬಗ್ಗೆ ರಾಮನಗರ ತೋಟಗಾರಿಕೆ ಅಧಿಕಾರಿ ಅಬ್ದುಲ್ಲ ದಳವಾಯಿ ಯವರು ಹೇಳುವಂತೆ ಇದು ಥೈವಾನ್ ಅಥವಾ ಥೈಲ್ಯಾಂಡ್ ನ ಅನಾನಸ್ ಇರಬಹುದು ಎನ್ನುತ್ತಾರೆ. ಸಿದ್ದಾಪುರದ ಜೋಶಿ ಯವರ ನರ್ಸರಿ ಯಿಂದ ತಂದಿರುವ ಅನಾನಸ್ ಗಿಡ ಇದಾಗಿದ್ದು, ಅವರು ಕೊಡುವಾಗ ಹೊರ ದೇಶದ ಅನಾನಸ್ ಎಂದು ಹೇಳಿದ್ದರು ಎನ್ನಲಾಗಿದೆ.ಆದರೆ ಯಾವರೀತಿಯ ಅನಾನಸ್ ಬರುತ್ತದೆ ಎಂದು ತಿಳಿದಿರಲಿಲ್ಲ. ಮುಳ್ಳು ಇಲ್ಲದ ಅನಾನಸ್ ಎಂದು ತಂದಿದ್ದರು.
