ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಂಪೂರ್ಣ ಸಹಕಾರ ವನ್ನು ಸಾರ್ವಜನಿಕ ರು ನೀಡುತ್ತಿರುವುದು ಕಂಡು ಬಂದಿದೆ, ನಂದಿಗದ್ದೆ, ಉಳವಿ, ಕುಂಬಾರ್ವಾಡ, ಅಣಶಿ, ಅವೇಡಾ, ಪ್ರಧಾನಿ, ನಾಗೋಡ ಸೇರಿದಂತೆ, ಎಲ್ಲ ಗ್ರಾಮ ಪಂಚಾಯತ ದಲ್ಲಿಯೂ ಕೂಡ ಶಾಸಕರು ಮಾಡುತ್ತಿರುವ ಕೆಲಸ ನಮಗಾಗಿ ಎಂದು ತಿಳಿದು ಜನತೆ ಸ್ವಚ್ಛತಾ ಕಾರ್ಯ ದಲ್ಲಿ ಭಾಗಿಯಾಗಿ ದ್ದಾರೆ.

ನಾಗೋಡಾ ಗ್ರಾಮ ಪಂಚಾಯತ್ ದಲ್ಲಿ ವಿಶೇಷ ವಾಗಿ ಶಾಸಕರು ಬರುವುದನ್ನೇ ಕಾಯ್ದು ಶಾಸಕರ ಸಮ್ಮುಖದಲ್ಲಿ ಯೇ ಕಾರ್ಯಕ್ರಮ ನಡೆಸಲು ಸ್ಥಳೀಯರು ಸಿದ್ಧತೆ ನಡೆಸಿದ್ದರು, ಸ್ಥಳೀಯರ ಭಾವನೆ ಯಂತೆ ಶಾಸಕ ಆರ್ ವಿ ದೇಶಪಾಂಡೆ ಅವರು ಬಂದು ಸ್ವಚ್ಛತೆಯ ಮಹತ್ವ ತಿಳಿಸಿದರು ಜನರಿಂದ ಜನರಿಗಾಗಿ ನಾವು ಮಾಡುವ ಕೆಲಸಕ್ಕೆ ಯಾರೂ ಸರಕಾರ ಮಾಡುತ್ತದೆ ಎಂದು ಕಾಯದೇ ಮಾಡುವ ಕೆಲಸವೇ ಸ್ವಚ್ಛತಾ ಕೆಲಸ ಎಂದು ಜನತೆಯನ್ನು ಹುರಿದುಂಬಿಸಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ರಾದ ಕೆ ಪಿ ಸಿಸಿ ಸದಸ್ಯ ಸದಾನಂದ ದಬಗಾರ ನಾಗೋಡಾ ಗ್ರಾಮ ಪಂಚಾಯತ, ಹಿಂದಿನ ಸದಸ್ಯ ಶ್ರೀಧರ ದಬಗಾರ, ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ರು ಉಪಸ್ಥಿತರಿದ್ದರು, ನಂತರ ಎಲ್ಲರೂ ಸ್ವಚ್ಚತಾ ಕಾರ್ಯದಲ್ಲಿ ಬಾಗಿಯಾದರು
