Banner Ad

ಸುದ್ಧಿಕನ್ನಡ ವಾರ್ತೆ
Goa: ಗೋವಾದ ಪೊಂಡಾ ಉಪಚುನಾವಣೆಗೆ (ELECTION) ದಿ. ರವಿ ನಾಯ್ಕ್ ಅವರ ಪುತ್ರ ರಿತೇಶ್ ನಾಯ್ಕ್ ಅವರ ಉಮೇದುವಾರಿಕೆಯನ್ನು BJP  ಘೋಷಿಸಿದೆ. ಆದ್ದರಿಂದ, ಈಗ ಈ ಚುನಾವಣೆಯಲ್ಲಿ ರಿತೇಶ್ ಮತ್ತು ಕೇತನ್ ಭಾಟೀಕರ್ ನಡುವೆ ನೇರ ಸ್ಫರ್ಧೆ ನಡೆಯಲಿದೆ. ಆಮ್ ಆದ್ಮಿ ಪಕ್ಷ (AAP ) ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಈ ಉಪಚುನಾವಣೆ ಈಗ ಬಹು ರಂಗಿನದ್ದಾಗಲಿದೆ.

ರಿತೇಶ್ ನಾಯ್ಕ್ ಮತ್ತು ವಿಶ್ವನಾಥ್ ದಳವಿ ಎಂಬ ಇಬ್ಬರು ಹೆಸರುಗಳನ್ನು ರಾಜ್ಯ ಬಿಜೆಪಿ ಅಭ್ಯರ್ಥಿಗಾಗಿ ಶಿಫಾರಸು ಮಾಡಿತ್ತು. ಅವರಲ್ಲಿ ನಿರೀಕ್ಷೆಯಂತೆ ರಿತೇಶ್ ಅವರ ಹೆಸರನ್ನು ದೃಢಪಡಿಸಲಾಗಿದೆ. ಕಾಂಗ್ರೆಸ್ ಈಗಾಗಲೇ ಡಾ. ಕೇತನ್ ಭಾಟಿಕರ್ ಅವರ ಉಮೇದುವಾರಿಕೆಯನ್ನು ಘೋಷಿಸಿದೆ.

Banner Ad

ಪೊಂಡಾ ಕ್ಷೇತ್ರಕ್ಕೆ ಮತದಾನ ಏಪ್ರಿಲ್ 9 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 23 ಕೊನೆಯ ದಿನಾಂಕವಾಗಿದೆ. ಆಮ್ ಆದ್ಮಿ ಪಕ್ಷವು ಈ ಉಪಚುನಾವಣೆಗೆ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಎರಡು ದಿನಗಳ ಹಿಂದೆ ಪಕ್ಷ ಸೇರಿದ ಗೀತೇಶ್ ನಾಯ್ಕ್ ಅವರ ಉಮೇದುವಾರಿಕೆಯನ್ನು  AAP  ಘೋಷಿಸಿದೆ. ಚುನಾವಣೆಯಲ್ಲಿ ಎಎಪಿಯ ನೇರ ಸ್ಫರ್ಧೆಯೊಂದಿಗೆ, ವಿರೋಧ ಪಕ್ಷಗಳ ಸಂಭಾವ್ಯ ಮೈತ್ರಿ ಕೊನೆಗೊಂಡಿದೆ. ಈಗ ಎಲ್ಲರ ಗಮನ ‘ಕ್ರಾಂತಿಕಾರಿ ಗೋವಾ’ (AG) ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರ ಮೇಲಿದೆ.

AAP ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಬಿಜೆಪಿ ವಿರೋಧಿ ಮತಗಳ ವಿಭಜನೆಯ ಸಾಧ್ಯತೆಯನ್ನು ಊಹಿಸಲಾಗುತ್ತಿದೆ.

Banner Ad