ಸುದ್ಧಿಕನ್ನಡ ವಾರ್ತೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯವುಂಟಾಗಿದೆ. ಇದರಿಂದಾಗಿ ಭಾರತದಲ್ಲಿ ಇದೀಗ ಪ್ರೀಮಿಯಂ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2.35 ರೂ ಹೆಚ್ಚಳವಾಗಿದೆ. ಈ ಪರಿಷ್ಕøತ ದರ ಮಾರ್ಚ 20 ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ- ಶುಕ್ರವಾರದಿಂದ ಭಾರತದ ತೈಲ ಕಂಪನಿಗಳು ತಮ್ಮ ಪ್ರೀಮಿಯಂ ಪೆಟ್ರೋಲ್ ದರವನ್ನು ಏರಿಕೆ ಮಾಡಿವೆ. ಭಾರತದ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (BPCL), ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (HPCL) , ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಕಂಪನಿಗಳು (IOCL) ಪೊಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.09 ರಿಂದ 2.35 ರೂಳವರೆಗೆ ಹೆಚ್ಚಳವಾಗಿದೆ.
ಸದ್ಯ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬೆಲೆ ಏರಿಕೆಯು ಕೇವಲ ಪ್ರೀಮಿಯಂ ಪೆಟ್ರೋಲ್ ಗೆ (Speed,Power, XP95) ಮಾತ್ರ ಅನ್ವಯವಾಗಲಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನೀಲ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಸುಜಾತಾ ಶರ್ಮಾ ರವರು ಈ ಕುರಿತು ಮಾಹಿತಿ ನೀಡಿದ್ದು-ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈಗ ನಿಯಂತ್ರಣ ಮುಕ್ತವಾಗಿದ್ದು ಇವುಗಳ ದರಗಳನ್ನು ಈಗ ಸರ್ಕಾರ ನಿರ್ಧರಿಸುವುದಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿ ತೈಲ ಕಂಪನಿಗಳೇ ಇಂಧನ ದರ ನಿರ್ಧರಿಸುತ್ತವೆ ಎಂದು ಅವರು ಹೇಳಿದ್ದಾರೆ.
