ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಶ್ರೀರಾಮ ಪ್ರೌಢಶಾಲೆಯ ಪ್ರೌಢ ಶಾಲೆಗಳ ವಿಭಾಗದಲ್ಲಿ 2025-26 ನೇ ಸಾಲಿನ ಅತ್ಯುತ್ತಮ SDMC ಶಾಲೆಯಾಗಿ ಆಯ್ಕೆಯಾಗಿದೆ.

ಸರ್ಕಾರಿ ಶಾಲೆಗಳನ್ನು ಮತ್ತು SDMCಗಳನ್ನು ಪ್ರೋತ್ಸಾಹಿಸಲು ಬ್ಲಾಕ್ ಮಟ್ಟದಲ್ಲಿ ಅತ್ಯುತ್ತಮ SDMC ಹೊಂದಿರುವ ಶಾಲೆಗೆ ಪ್ರಶಸ್ತಿ ನೀಡುವುದು,ಸರ್ಕಾರಿ ಶಾಲೆಗಳ ಗುಣಮಟ್ಟ ಶಿಕ್ಷಣ ಅಭಿವೃದ್ಧಿ ಸಂಬಂಧ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ SDMC ಸಮಿತಿಗಳನ್ನು ಗುರುತಿಸುವುದು. ಸಮಿತಿಗಳಲ್ಲಿ ಸರ್ಧಾತ್ಮಕ ಮನೋಭಾವನೆ ಬೆಳೆಸುವುದು. SDMC ಸದಸ್ಯರಿಗೆ ಉತ್ತಮ ಶಾಲೆ ಹೇಗಿರುತ್ತದೆ ಎಂಬುದರ ಅರಿವು ಮೂಡಿಸುವುದು. ಸದಸ್ಯರಿಗೆ ಸಮುದಾಯದ ಸಹಕಾರದೊಂದಿಗೆ ಶಾಲೆಯಲ್ಲಿ ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹಿಸುವುದು. ವಿವಿಧ ಶಾಲೆಗಳ SDMCಗಳ ನಡುವೆ ಆರೋಗ್ಯಕರ ಸ್ಪರ್ಧೆ ಉತ್ತೇಜಿಸುವುದು. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ SDMC ಸಮಿತಿಯ ಶಾಲೆಗಳ ಪ್ರಶಸ್ತಿ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮೀಕ್ಷೆಗೆ ಪಾಲ್ಗೊಳ್ಳುವ ಮೂಲಕ ಪ್ರಶಸ್ತಿ ಪಡೆಯಲು ಅವಕಾಶ ನೀಡಲಾಗಿತ್ತು.
ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ಇಲಾಖೆ2025,26 ನೇ ಸಾಲಿನಲ್ಲಿ ಎಸ್ ಡಿ ಎಂ ಸಿ ಗಳ ಮೂಲಕ ಶಾಲಾ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ ಮತ್ತು ದಾಖಲಾತಿ ಹೆಚ್ಚಳಕ್ಕೆ ಒತ್ತು ನೀಡುತ್ತಿದೆ.
ಪುಷ್ಟಿ ಯೋಜನೆ ,ಎಸ್ ಡಿ ಎಂ ಸಿ 2025,26 ಪ್ರಮುಖಾಂಶಗಳು:
ಶಾಲಾ ಅಭಿವೃದ್ಧಿ ಯೋಜನೆ ಎಸ್ ಡಿ ಪಿ : 2025,26ನೇ ಸಾಲಿಗೆ ಎಸ್ ಡಿ ಎಂ ಸಿ ಸಮಿತಿಗಳು ಶಾಲೆಯ ಮೂಲಸೌಕರ್ಯ, ಬೋಧನಾ ಗುಣಮಟ್ಟ ಮತ್ತು ದಾಖಲಾತಿ ಹೆಚ್ಚಳಕ್ಕಾಗಿ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು.
ಪಾರದರ್ಶಕತೆ: ಎಸ್ ಡಿ ಎಂ ಸಿ ಸಭೆಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಮತ್ತು ಶಾಲಾ ಅನುದಾನದ ಸಮರ್ಪಕ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಲಿತಾಂಶ,ಶಿಕ್ಷಕರ ಹಾಜರಾತಿ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಾಲಾ ಆವರಣದ ನಿರ್ವಹಣೆಯನ್ನು ಎಸ್ ಡಿ ಎಂ ಸಿ ಮೇಲ್ವಿಚಾರಣೆ ಮಾಡುವುದು.ಈ ಎಲ್ಲಾ ಅಂಶಗಳನ್ನು ಸಮೀಕ್ಷಾ ತಂಡದವರು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗಿದೆ.ಸರ್ಕಾರಿ ಶ್ರೀರಾಮ ಪ್ರೌಢ ಶಾಲೆಯು ತಾಲೂಕಾ ಕೇಂದ್ರ ಸ್ಥಾನದಲ್ಲಿರುವ ಶಾಲೆಯಾಗಿದ್ದು, ಸುತ್ತಮುತ್ತಲಿನ ಹಲವಾರು ಪ್ರಾಥಮಿಕ ಶಾಲೆಗಳಿಂದ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕಾಗಿ ದಾಖಲಾಗುತ್ತಾರೆ. ಸ್ಥಳೀಯ ವಿದ್ಯಾರ್ಥಿಗಳ ಜೊತೆಗೆ ಹಾಸ್ಟೆಲ್‌ನಲ್ಲಿ ವಸತಿ ಮಾಡುವ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ತೆಗೆದುಕೊಂಡು ನಿರಂತರ ಪರಿಶ್ರಮದಿಂದ ಪ್ರೌಢಶಿಕ್ಷಣ ಮಂಡಳಿಯವರು ಪಾರದರ್ಶಕವಾಗಿ ನಡೆಸುವ SSLC ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಪಲಿತಾಂಶ ನೀಡುತ್ತಾ ಬಂದಿದ್ದಾರೆ. SDMC ಯವರ ಸಹಕಾರದೊಂದಿಗೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಶಾಲಾ ವಾತಾವರಣವನ್ನು ವಿವಿಧ ರೀತಿಯ ಚಿತ್ರಗಳಿಂದ ಸುಂದರಗೊಳಿಸಿ ಆಕರ್ಷಣಿಯವನ್ನಾಗಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 297 ವಿದ್ಯಾರ್ಥಿಗಳು ದಾಖಲಾಗಿದ್ದು, ಉತ್ತಮ ಹಾಜರಾತಿಯನ್ನು ಹೊಂದಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಪ್ರೋತ್ಸಾಹ ಯೋಜನೆಗಳು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟ, ಪ್ರತಿಭಾಕಾರಂಜಿ, ಕಲೋತ್ಸವ ಪ್ರಾಚ್ಯಪ್ರಜ್ಞೆ,ವಿಜ್ಞಾನ ವಸ್ತುಪ್ರದರ್ಶನ ಮೊದಲಾವುಗಳಲ್ಲಿ ಕ್ಲಸ್ಟರ್, ತಾಲೂಕು,ಜಿಲ್ಲಾ,ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗೆ ಭವಿಷ್ಯ ರೂಪಿಸುವ ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿಗಳ ಸೃಜನಶೀಲತೆಗೆ ಒತ್ತು ನೀಡುವ ರಂಗೋತ್ಸವ,ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ರಾಷ್ಟ್ರೀಯ ಅವಿಷ್ಕಾರ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ಪ್ರಾರ್ಥನಾ ವೇಳೆಯ ಸಚೇತನ,ವಿದ್ಯಾರ್ಥಿಗಳಿಗೆ ಹಲವಾರು ಸಹಪಠ್ಯ ಚಟುವಟಿಕೆಗಳುಮಹಾನ್ ನಾಯಕರುಗಳ ಆಚರಣೆಯ ಜೊತೆಗೆ ಮಾಹಿತಿಯನ್ನು ನೀಡುವಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗಿದೆ.ಶ್ರೀರಾಮ ಪ್ರೌಢಶಾಲೆಯ SDMC ಯ ಕ್ರೀಯಾಶೀಲ ಅಧ್ಯಕ್ಷರಾದ ಸಂದೀಪ ಜಿ ನಾಯ್ಕ, ಉಪಾಧ್ಯಕ್ಷರಾದ ಕವಿತಾ ರೇವಣಕರ,ಸದಸ್ಯರಾದ ರೋಮಾ ನಾಯ್ಕ,ಸ್ನೇಹಾ ಪಾಟೀಲ,ಅನ್ನು ಮೇರಿ, ಗಂಗುತಾಯಿ ನಾಯ್ಕ ರಾಜೇಶ್ರೀ ಹಂಜನ, ದತ್ತಾರಾಮ ಚಾಪಗಾಂವಕರ ಮತ್ರ అనిల ದೇಸಾಯಿ ಇವರುಗಳ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ ತನು – ಮನ – ಧನದ ಮೂಲಕ ಸಹಕಾರ ನೀಡುತ್ತಿರುವುದು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಜಕುಮಾರ ನಾಯಕ,ಇವರ ಜೊತೆಯಲ್ಲಿ ಅನುಭವಿ ವಿಷಯ ಶಿಕ್ಷಕರುಗಳಾದ ಶ್ರೀ ಗಿರೀಶ ಕೋಟೆಮನೆ, ಶ್ರೀಮತಿ ದೀಪಾಕೋಠಾರಕರ, ಶ್ರೀ ಎಂ. ಎಂ. ಮುಲ್ಲಾ, ಶ್ರೀಮತಿ ನಾಗವೇಣಿ ಭಟ್, ಶ್ರೀ ಎಸ್. ಎಸ್. ಕುರಬೆಟ್ಟ ಹಾಗೂ ಅತಿಥಿ ಶಿಕ್ಷಕರುಗಳಾದ ಪ್ರಿಯಾಂಕಾ ಶೇಟ್, ಗುಲಾಬಿ ನಾಯ್ಕ, ಸರಿತಾ ನಾಯ್ಕ ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ಸಂಜೀವ ಗೌಡ ಪಾಟೀಲ ರವರನ್ನೊಳಗೊಂಡ ಸಿಬ್ಬಂದಿ ವರ್ಗದವರ ಸಮರ್ಪಣಾ ಮನೋಭಾವ, ಪಾಲಕ- ಪೋಷಕರೊಂದಿಗಿನ ಉತ್ತಮ ಬಾಂಧವ್ಯ, ಸಹಕಾರ ಪ್ರೋತ್ಸಾಹದ ಜೊತೆಗೆ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಶೀರ್ ಅಹ್ಮದ್ ಶೇಖ್ ರವರ ಪ್ರೋತ್ಸಾಹ, ಮಾನ್ಯ ಉಪನಿರ್ದೇಶಕರಾದ ಶ್ರೀ ಡಿ. ಆರ್. ನಾಯ್ಕರವರ ಮಾರ್ಗದರ್ಶನ, ಬೆಳಗಾವಿ ಸಿ.ಟಿ.ಇ. ಪ್ರವಾಚಕರಾದ ಶ್ರೀ ಬಸವರಾಜ ಪಾರಿರವರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ತ್ರಿವೇಣಿ ನಾಯಕ,ಶ್ರೀ ಎಂ. ಕೆ. ಮೊಗೇರ, ಶ್ರೀ ಎಂ. ಎಂ. ಹೆಗಡೆ ಇವರುಗಳ ಸಕಾಲಿಕ ಸಲಹೆ- ಸೂಚನೆ ಮಾರ್ಗದರ್ಶನಗಳಿಂದ ಅತ್ಯುತ್ತಮ ಮಾದರಿ ಶಾಲೆಯಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ.
ತಾಲೂಕಿನ ಮಾದರಿ ಶಾಲೆಯಾಗಿರುವ ಸರ್ಕಾರಿ ಶ್ರೀರಾಮ ಪ್ರೌಢಶಾಲೆಗೆ ಅತ್ಯುತ್ತಮ SDMC ಪ್ರಶಸ್ತಿ ದೊರೆತಿರುವುದಕ್ಕೆ SDMC ಯ ಅಧ್ಯಕ್ಷರು, ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ ಹಾಗೂ ಊರಿನ ಪಾಲಕ- ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
