ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ : ಪಟ್ಟಣದ ಸಬಗೇರಿಯ ಪುಟ್ಟ ಪೋರಿ ಸಾನಿಯಾ ನದಾಫ್ ಳನ್ನು ತನ್ನ ಅಸಾಧಾರಣ ಸ್ಮರಣಶಕ್ತಿ ಮತ್ತು ಬಾಲ್ಯದಲ್ಲೇ ಮಾಡಿದ ಸಾಧನೆಗಳನ್ನು ಗಮನಿಸಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ಗೆ ಆಯ್ಕೆ ಮಾಡಲಾಗಿದೆ.

ಕೇವಲ 3 ವರ್ಷ 8 ತಿಂಗಳ ಸಾನಿಯಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಣ ಸ್ಮರಣ ಶಕ್ತಿಯನ್ನು ಹೊಂದಿದ್ದು, ಹಣ್ಣುಗಳು, ವಾಹನಗಳು, 30ಕ್ಕೂ ಅಧಿಕ ರೈಮ್ಸ್‌ಗಳು, ಇಂಗ್ಲೀಷ್ ಶಬ್ದಗಳು, ನಾನಾ ತರನಾದ ಹಣ್ಣು ಹೂಗಳ ಹೆಸರುಗಳು ಮುಂತಾದವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕಎಲ್ಲರನ್ನೂ ಚಕಿತಗೊಳಿಸದ್ದಾಳೆ. ಈ ಪುಟ್ಟ ಪೋರಿಯ ಜ್ಞಾಪನಾ ಶಕ್ತಿಯನ್ನು ಗಮಿನಿಸಿ, ಚಿಕ್ಕ ಮಕ್ಕಳ ವಿಭಾಗದಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ಈಕೆ ಕೇವಲ 8 ತಿಂಗಳ ವಯಸ್ಸಿನಲ್ಲೇ ಮಾತನಾಡಲು ಪ್ರಾರಂಭಿಸಿ ಕುಟುಂಬದವರನ್ನು ಆಶ್ಚರ್ಯಗೊಳಿಸಿದ್ದಳು.

ಕೇವಲ ಒಂದೂವರೆ ವರ್ಷದ ವಯಸ್ಸಿನಲ್ಲೇ ಇಂಗ್ಲಿಷ್‌ ಅಕ್ಷರಮಾಲೆಯನ್ನು ಎ ದಿಂದ ಝಡ್ ವರೆಗೆ ಸ್ಪಷ್ಟವಾಗಿ ಹೇಳುವ ಮೂಲಕ ತನ್ನ ಅಪೂರ್ವ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಳು.

ಈಕೆ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಲ್ಲಿ ಡಿ.ಆರ್.ಎಫ್.ಓ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾಬಿ ನದಾಫ್ ಅವರ ಪುತ್ರಿಯಾಗಿದ್ದು, ಯಲ್ಲಾಪುರದ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಮಮ್ರಾಜ್ ನದಾಫ್ ಅವರ ಮೊಮ್ಮಗಳಾಗಿದ್ದಾಳೆ. ಕೇವಲ ಬುದ್ದಿಶಕ್ತಿಯಿಂದಷ್ಟೇ ಅಲ್ಲದೇ, ಛದ್ಮವೇಷ, ಹಾಡುವ ಸ್ಪರ್ಧೆಯಲ್ಲಿಯೂ ಸಹ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಈ ಸಾಧನೆ ಕುಟುಂಬದವರಿಗೆ ಹೆಮ್ಮೆಯನ್ನು ತಂದಿದೆ.