ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಯರೆಯ ಶ್ರೀ ಗೌಳಾದೇವಿಯ ಜಾತ್ರೋತ್ಸವ ನಿಮಿತ್ತ ಫೆಬ್ರುವರಿ 28 ಹಾಗೂ ಮಾರ್ಚ 01 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಫೆಬ್ರುವರಿ 28 ರ ಶನಿವಾರ ಬೆಳಿಗ್ಗೆ 8.00 ಗಂಟೆಗೆ ಪೂಜಾ ಕಾರ್ಯಕ್ರಮ.9:00 ಗಂಟೆಗೆ ಜ್ಞಾನೇಶ್ವರಚಾ 9 ಮತ್ತು 12 ನೇ ಅಧ್ಯಾಯದ ವಾಚನ.ಮಧ್ಯಾಹ್ನ 3:00 ಗಂಟೆಗೆ ಗಾಥಾ ಭಜನ.ಸಾಯಂಕಾಲ 5:00 ಗಂಟೆಗೆ ಪ್ರವಚನ,7:00 ರಿಂದ 8:00 ಹರಿಪಾಠ,ರಾತ್ರಿ 9:00 ರಿಂದ 12:00 ಗಂಟೆಯವರೆಗೆ ಕೀರ್ತನೆಯ ಕಾರ್ಯಕ್ರಮ ಶ್ರೀ ನಾಗರಾಜ ಮಹಾರಾಜ್,ಶ್ರೀ ವಿಠ್ಠಲ ಮಹಾರಾಜ್,ಶ್ರೀ ಮಾಣಿಕರಾವ್ ಮಹಾರಾಜ್,ಶ್ರೀ ಗೋಪಾಲ ಮಹಾರಾಜ್ ಇವರುಗಳು ನಡೆಸಿಕೊಡಲಿದ್ದಾರೆ. ಮಾರ್ಚ 01 ರ ಭಾನುವಾರ ಬೆಳಿಗ್ಗೆ ಪೂಜಾ ಕಾರ್ಯಕ್ರಮ,ಮಧ್ಯಾಹ್ನ 12:00 ಗಂಟೆಗೆ ದೇವಿಗೆ ಸೀರೆ ಉಡಿಸುವ ಕಾರ್ಯಕ್ರಮ.ನಂತರ ಆಶೀರ್ವಾದ,ತೀರ್ಥ ಪ್ರಸಾದ ವಿತರಣೆ.ಮಧ್ಯಾಹ್ನ 2:00 ರಿಂದ 5:00 ರವರೆಗೆ ಅನ್ನಸಂತರ್ಪಣೆ(ಮಹಾಪ್ರಸಾದ).ಸಂಜೆ 5:00 ಗಂಟೆಗೆ ಮಹಾರುದ್ರ ಭಜನಾ ಮಂಡಳಿ, ಪೊಂಡಾ-ಗೋವಾ ಇವರಿಂದ ಭಜನಾ ಕಾರ್ಯಕ್ರಮ.ಸವಾಲ್ ಕಾರ್ಯಕ್ರಮ,ದೇಣಿಗೆ ಕೂಪನ್ ಡ್ರಾ,ರಾತ್ರಿ ಮರಾಠಿ ನಾಟಕದ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.