Banner Ad

ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಮತ್ತು ಪಶ್ಚಿಮ ಘಟ್ಟ ಭಾಗಗಳಲ್ಲಿ ಈಗಾಗಲೇ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಯೋಜನೆಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳು ಈಗಾಗಲೇ ಗೋಚರವಾಗುತ್ತಿವೆ. ಅಂತದ್ದರಲ್ಲಿ ಇದೀಗ ಸರ್ಕಾರವು ಮತ್ತೊಂದು ನದಿ ಜೋಡಣೆ ಯೋಜನೆ ರೂಪಿಸಿದೆ. ಈ ಯೋಜನೆಯ ಪ್ಲಾನ್ ಹಿಡಿದು ಸರ್ಕಾರವು ಉತ್ತರ ಕನ್ನಡದತ್ತ ಮುಖ ಮಾಡಿದೆ.

ನದಿಗಳು ಹರಿಯುವ ದಿಕ್ಕನ್ನು ಬದಲಿಸಿ ಅವುಗಳನ್ನು ಮತ್ತೊಂದೆಡೆಗೆ ಕಳುಹಿಸುವುದು ಸರ್ಕಾರದ  ಯೋಜನೆಯಾಗಿದೆ. ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಬೇರೆ ನದಿಗಳೊಂದಿಗೆ ಜೋಡಿಸಿ ಬಯಲು ಸೀಮೆ ಪ್ರದೇಶಗಳಿಗೆ ನೀರು ಹರಿಸುವುದರಿಂದ ಉತ್ತರ ಕನ್ನಡದ ವಿವಿಧ ಭಾಗಗಳಲ್ಲಿ ನೀರಿಲ್ಲದೆ ಜನ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಇದರಿಂದಾಗಿ ಇಂತಹ ಯೋಜನೆ ಬೇಡವೇ ಬೇಡ ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

Banner Ad

ಬಿಡ್ತಿ ಮತ್ತು ಅಘನಾಶಿನಿ ನದಿಗಳ ಮೇಲೆ ಉತ್ತರ ಕನ್ನಡದ ಹೆಚ್ಚಿನ ಜನರು ಅವಲಂಬಿತರಾಗಿದ್ದಾರೆ. ಬೇಸಿಗೆ ಸಮಯದಲ್ಲಿ ಈ ನದಿಗಳಿಗೆ ಈಗಾಗಲೇ ನೀರಿಲ್ಲದೆಯೇ ಜನತೆ ಪರದಾಡುತ್ತಿದ್ದಾರೆ. ಆದರೆ ನದಿ ತಿರುವು ಮಾಡಿದರೆ ಇಲ್ಲಿಯ ಜನರ ಸ್ಥಿತಿ ಏನಾಗಲಿದೆ ಎಂದು ಉತ್ತರ ಕನ್ನಡದ ಜನತೆ ಆತಂಕಕ್ಕೀಡಾಗಿದ್ದಾರೆ.

ಬೆಡ್ತಿ ಮತ್ತು ಅಘನಾಶಿನಿ ನದಿಗಳು ಕೇವಲ ಮಳೆಗಾಲದ ಸಮಯದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಆದರೆ ಮಳೆಗಾಲ ಕಳೆಯುತ್ತಿದ್ದಂತೆಯೇ ಈ ನದಿಗಳು ಸಂಪೂರ್ಣ ಬತ್ತಿ ಹೋಗುತ್ತವೆ. ಬೇಸಿಗೆ ಸಮಯ ದಲ್ಲಂತೂ ನದಿಗಳು ಸಂಪೂರ್ಣ ಬತ್ತಿ ಹೋಗುತ್ತವೆ. ಉತ್ತರ ಕನ್ನಡ ಸ್ಥಿತಿ ಹೀಗಿರುವಾಗ ಇವೆಲ್ಲ ಸಮಗ್ರ ಪರಿಶೀಲನೆ ನಡೆಸದೆ ಸರ್ಕಾರವು ಇಂತಹ ಯೋಜನೆಯ ಜಾರಿಗೆ ಮುಂದಾಗಿರುವುದು ಈ ಭಾಗದ ಜನತೆಯ ತೀವ್ರ ವಿರೋಧಕ್ಕೂ ಕಾರಣವಾಗಿದೆ.

ಬೇಡ್ತಿ ಮತ್ತು ಅಘನಾಶಿನಿ ನದಿಗಳು ಉತ್ತರ ಕನ್ನಡದ ಜೀವನಾಡಿ ಹಾಗೂ ಜೀವನದಿಗಳಾಗಿವೆ. ಈ ನದಿಗಳ ತಿರುವು ಯೋಜನೆಗೆ ಈ ಭಾಗದಲ್ಲಿ ತೀವ್ರ ವಿರೋಧವಿದ್ದರೂ ಕೂಡ ಸರ್ಕಾರ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಈ ನದಿ ಜೋಡಣೆ ವಿರೋಧಿಸಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಲಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸರ್ಕಾರವು ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಮಾತು ಬಂದಾಗ ತನ್ನ ಜಾಣ ಕಿವುಡುತನ ತೋರಿಸುತ್ತದೆ. ಆದರೆ ಇತರ ಭಾಗಗಳಿಗೆ ಲಾಭವಿದ್ದರೆ ಉತ್ತರ ಕನ್ನಡವನ್ನು ಇಲ್ಲಿನ ಪರಿಸರವನ್ನು ಲೆಕ್ಕಿಸದೆ ಈ ಜಿಲ್ಲೆಯನ್ನೇ ಬಳಸಿಕೊಳ್ಳುತ್ತವೆ ಎಂಬುದು ಈ ಭಾಗದ ಜನರ ಬೇಸರವಾಗಿದೆ.

ನದಿ ತಿರುವು ಯೋಜನೆ ವಿರೋಧಿಸಿ ಪಶ್ಚಿಮ ಘಟ್ಟ ಮತ್ತು ನದಿ ಕಣಿವೆಗಳನ್ನು ಉಳಿಸಲು ಆಗ್ರಹಿಸಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣ ಸಮಿತಿಯು ಅಕ್ಟೋಬರ್ 10ರಂದು ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸಿದೆ.

Banner Ad