ಸುದ್ದಿ ಕನ್ನಡ ವಾರ್ತೆ

. ಕಾರವಾರ:ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಒಂದು ಟಾಟಾ ಕಂಪನಿಯ ಟ್ಯಾಂಕರ್ ನೋಂದಣಿ ಸಂಖ್ಯೆಯ MP-09 HH-1908 AUEE 30,000 EaoA Denatured rectified spirit (nonpotable) ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾವಣೆಗೆರೆ ಶುಗರ್ ಕಂಪನಿ ಲಿಮಿಟೆಡ್ ಇಲ್ಲಿಂದ ಗೋವಾ ರಾಜ್ಯದ ಗ್ಲೋಬಲ್ ಕಮ್ ಕಾರ್ಪ್ ಕುಂಡೇಮ್,ಗೋವಾ ರಾಜ್ಯ ಇಲ್ಲಿಗೆ ಸಾಗಿಸುತ್ತಿರುವುದನ್ನು ಹಾಗೂ ಅದೇ ರೀತಿ ಇನ್ನೊಂದು ಟ್ಯಾಂಕರ್ ಲಾರಿ ನೋಂದಣಿ ಸಂಖ್ಯೆ ಎಂ-48 0-2218 ರಲ್ಲಿ ಶ್ರೀಸಾಯಿ ಟ್ರೇಡರ್ಸ್ ಕಂಪನಿ, ಕೊಲೆಹಳ್ಳಿ ಹಡದಿ ರೋಡ್, ದಾವಣಗೆರೆತಾಲೂಕು, ದಾವಣಗೆರೆ ಜಿಲ್ಲೆ ಇಲ್ಲಿಂದ ವರ್ಧನ್ ಸಷ್ಟಿಮೆಂಟ್ಸ್ ಇಂಡಿಯಾ ಪೈ.ಲಿ. ಪಿಲರ್ನಇಂಡಸ್ಟ್ರೀಯಲ್ ಎಸ್ಟೇಟ್ ಎರಿಯಾ, ಗೋವಾ ರಾಜ್ಯ ಇಲ್ಲಿಗೆ 20,000 ಲೀಟರ್ಸ್ Ethanol (Non Potable Purpose) ಎಂದು ನಕಲಿ ದಾಖಲೆಗಳನ್ನುಸೃಷ್ಟಿಸಿ ಸಾಗಿಸಲಾಗುತ್ತಿದ್ದ ವಾಹನಗಳನ್ನು ಅಬಕಾರಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯ ಮಂಗಳೂರು ವಿಭಾಗ, ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಎ. ಎಲ್ ನಾಗೇಶ, ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ. ಅವರ ಮಾರ್ಗದರ್ಶನದಂತೆ ಫೆಬ್ರವರಿ 21 ರಂದು ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು. ಈ ಟ್ಯಾಂಕರ್ ಗಳಲ್ಲಿದ್ದ ಮದ್ಯಸಾರವನ್ನು ಪ್ರೈಮರಿ ಡಿಸ್ಟಿಲರಿಯ ಕೆಮಿಸ್ಟ್ ರನ್ನು ಸ್ಥಳಕ್ಕೆ ಕರೆಯಸಿ ಅಲ್ಕೋ ಮೀಟರ್ ಉಪಕರಣದ ಮೂಲಕ ಪರೀಕ್ಷೆ ಮಾಡಿಸಲಾಗಿ, ಅದು Extra Neutral Alcohol ಆಗಿರುವುದು ಕಂಡುಬಂದಿದ್ದರಿಂದ ಸದರಿ ಎರಡೂ ಟ್ಯಾಂಕರ್ ಗಳನ್ನು ಹಾಗೂ ಅವುಗಳಲ್ಲಿದ್ದ 50,000 ಲೀಟರ್ಸ್ Extra Neutral Alcohol ನ್ನು ಜಪ್ಪುಪಡಿಸಿ, ಟ್ಯಾಂಕರ್ ಚಾಲಕರುಗಳಾದ ಮಗ್ನರ್ ಸಿಂಗ್ ಬಿನ್ ಮೋಹನ ಸಿಂಗ್ ವಾಸ:ಟಿ.ಪಿ. ನಗರ್ ಇಂದೋರ್ ಮಧ್ಯಪ್ರದೇಶ ಎಂಬಾತನನ್ನು ಹಾಗೂ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ವಾಸ ಬಾಂಬೆ ಎಂ.ಡಿ.ಟಿ.ಎಸ್ ಜಿಲ್ಲಾ:-ಗದಗ ತಾಲೂಕು:ರೋಣ ಇಬ್ಬರೂ ಆರೋಪಿಗಳನ್ನು ದಸ್ತಗಿರಿಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.
ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ಹಾಗೂ ಅಬಕಾರಿ ನಿರೀಕ್ಷಕರು ದಾಂಡೇಲಿ ವಲಯ ಇವರು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದು, ಜಪ್ಪು ಪಡಿಸಿದ ತಟಸ್ಥ ಮದ್ಯಸಾರದ ಅಂದಾಜು ಬೆಲೆ 40,00,000 ( ನಲವತ್ತು ಲಕ್ಷಗಳಾಗಿದ್ದು, ಟ್ಯಾಂಕರ್ ಗಳ ಅಂದಾಜು ಬೆಲೆ ರೂಪಾಯಿ 50,00,000 ( ಐವತ್ತು ಲಕ್ಷ)ರೂಪಾಯಿಗಳಾಗಿರುತ್ತವೆ. ಒಟ್ಟು ಅಂದಾಜು ಬೆಲೆ ರೂಪಾಯಿ 90,00,000 ( ತೊಂಭತ್ತು ಲಕ್ಷ) ರೂಪಾಯಿಗಳಾಗಿರುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.