ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ತೇರಾಳಿಯಲ್ಲಿ,,ತಡಿಪಾರ,, ನಾಟಕ. ಮಹಾಲಸಾ ದೇವಿಯ ವಾರ್ಷಿಕೋತ್ಸವದ ನಿಮಿತ್ತ ತೇರಾಳಿಯಲ್ಲಿ ಬುಧವಾರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆದ ರಮೇಶ ನಾಯ್ಕ ರತ್ನಾಕರ ದೇಸಾಯಿ, ಸುರೇಶ ನಾಯ್ಕ್,ಚಂದ್ರ ಕಾಂತ್ ದೇಸಾಯಿ, ಸುಧಾಕರ್ ದೇಸಾಯಿ ಮತ್ತು ಮಿತ್ರ ಮಂಡಳಿ ಯವರು ಜಾತ್ರೆ ಯನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ ಕೈ ಕೊoಡಿದ್ದಾರೆ, ಅದರಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ, ಬುಧವಾರ ಬೆಳಿಗ್ಗೆಯಿಂದ ಮಾಳಸಾ ದೇವಿಯ ಧಾರ್ಮಿಕ ಸೇವೆಗಳು, ಕಾರ್ಯಕ್ರಮ ಗಳು ಪ್ರಾರಂಭ ವಾಗುತ್ತವೆ. ಇಡೀ ದಿನ ದೇವಿಯ ಆರಾಧನೆ ಪೂಜೆ ಗಳು ನಡೆಯುತ್ತವೆ ಮದ್ಯಾಹ್ನ 5 ಘಂಟೆ ಯಿಂದ ರಾತ್ರಿ 10 ಘಂಟೆ ಯ ವರೆಗೆ ಅನ್ನ ಪ್ರಸಾದ ನಡೆಯುತ್ತದೆ, ರಾತ್ರಿ 9 ಘಂಟೆ ಯಿಂದ ಶ್ರೀ ದೇವಿಯ ಪ್ರಸಾದಗಳ ಸವಾಲ್ ಕಾರ್ಯಕ್ರಮ ನಡೆದು ನಂತರ ರಾತ್ರಿ 12 ಘಂಟೆ ಯಿಂದ ನಾಟಕ ತಡಿಪಾರ್ ನಡೆಯಲಿದೆ. ಸುತ್ತ ಮುತ್ತಲಿನ ತೇರಾಳಿ ಬಾಮಣೆ, ಶಿರೋಳಿ, ಜೋಯಿಡಾ ದ ಭಕ್ತರು ಬಂಧು ದೇವಿಯ ಕೃಪೆಗೆ ಪಾತ್ರ ರಾಗಬೇಕೆಂದು ದೇವಸ್ಥಾನ ಕಮಿಟಿ ಮತ್ತು ಗ್ರಾಮಸ್ಥರು ಕೇಳಿಕೊಂಡಿದ್ದಾರೆ.