ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದ ಹೊಸೂರಿನಲ್ಲಿರುವ ಒಎಂಜಿ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ರುದ್ರ ಪಾರಾಯಣದಲ್ಲಿ 25 ವೇದ ವಿದ್ವಾಂಸರು ಸತತ 34 ಗಂಟೆಗಳ ಕಾಲ ನಿರಂತರ ರುದ್ರ ಪಠಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ತಾಲೂಕಿನ ಉಮ್ಮಚಗಿಯ ಶ್ರೀಮಾ ಸಂಸ್ಕೃತ ಮಹಾಪಾಠಶಾಲೆಯ ವಿದ್ಯಾರ್ಥಿಗಳಾದ ಶುಭಾಂಗ ಹೆಗಡೆ ಚಿಪಗೇರಿ ಹಾಗೂ ವೀರೇಂದ್ರ ಭಟ್ಟ ಕಾರವಾರ ಅವರು ಈ ತಂಡದ ಸದಸ್ಯರಾಗಿದ್ದುದು ವಿಶೇಷ. ದಾಖಲೆ ಮಾಡಿದ ತಂಡದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ವೇದ ವಿದ್ವಾಂಸರು ಭಾಗವಹಿಸಿದ್ದರು.