ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ಫೆಬ್ರವರಿ 6 ರಿಂದ 8 ರ ವರಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯ ಮತ್ತು ಕುಸ್ತಿ ಅಖಾಡದಲ್ಲಿ ತರಬೇತಿ ಪಡೆಯುತ್ತಿರುವ ಕುಸ್ತಿ ಪಟುಗಳು ಪದಕ ವಿಜೇತರಾಗಿದ್ದಾರೆ.
15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 38 ಕೆಜಿ ಮಣಿಕಂಠ ಕಮ್ಮಾರ ತೃತೀಯ,41 ಕೆಜಿ ಪ್ರಜ್ವಲ್ ಗೋಲಿಹಳ್ಳಿ ತೃತೀಯ,44 ಕೆಜಿ ಜಿಗರ್ ಪವಾರ್ ದ್ವಿತೀಯ, 45 ಕೆಜಿ ಅಭಿಲಾಷ್ ಉರ್ಬಾನಟ್ಟಿ ತೃತೀಯ, 15 ವರ್ಷದೊಳಗಿನ ಬಾಲಕಿರ ವಿಭಾಗದಲ್ಲಿ 39 ಕೆಜಿ ಸಂಧ್ಯಾಗೌಡಾ ದ್ವಿತೀಯ, 54 ಕೆಜಿ ಗಾಯತ್ರಿ ಬಡಿಗೇರ್ ದ್ವಿತೀಯ.33 ಕೆಜಿ ಆರೋಹಿ ಮಾನೆ ತೃತೀಯ 46 ಕೆಜಿ ಗಾಯತ್ರಿ ಬೆಕ್ವಾಡಕರ ತೃತೀಯ, 46 ಕೆಜಿ ಪವಿತ್ರಾ ಘಟಕೊಳ್ಳರ್ ತೃತೀಯ, 54 ಕೆಜಿ ಸ್ನೇಹಾ ಬೋಬಿ ತೃತೀಯ.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 48 ಕೆಜಿ ಶಂಕರಗೌಡ ಪಾಟೀಲ ಪ್ರಥಮ. 60 ಕೆಜಿ ಜುನೈದ್ ನದಾಫ್ ತೃತೀಯ,17 ಬಾಲಕಿಯರ ವಿಭಾಗದಲ್ಲಿ 40 ಕೆಜಿ ನಂಜನಗೂಡು ಬಾಲ ಕಿಶೋರಿ ಪ್ರಶಸ್ತಿ ಸುಶ್ಮಿತಾ ಕಮ್ಮಾರ್ ಪ್ರಥಮ, 53 ಕೆಜಿ ಕಾವ್ಯಾ ದಾನ್ವೆನ್ನವರ್ ಪ್ರಥಮ, 53 ಕೆಜಿ ಪ್ರತಿಕ್ಷಾ ಶೆರೆಕರ್ ದ್ವಿತೀಯ, 61 ಕೆಜಿ ನಂಜನಗೂಡು ಬಾಲ ಕುಮಾರಿ ಪ್ರಶಸ್ತಿ ಸವಿತಾ ಸಿದ್ದಿ ಪ್ರಥಮ, 61 ಕೆಜಿ ವರ್ಷಾ ಯಮನಪ್ಪನವರ ತೃತೀಯ,
ಹಿರಿಯ ಮಹಿಳೆಯರ ವಿಭಾಗದಲ್ಲಿ 61 ಕೆಜಿ ಕರ್ನಾಟಕ ಕಿಶೋರಿ ಪ್ರಶಸ್ತಿ ಗಾಯತ್ರಿ ಸುತಾರ ಪ್ರಥಮ, ಶಾಲಿನಾ ಸಿದ್ದಿ ದ್ವಿತೀಯ. ಪ್ರಿನ್ಸಿಟಾ ಸಿದ್ದಿ ತೃತೀಯ, 65 ಕೆಜಿ ಭಗವತಿ ಗೊಂದಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜೇತ ಕುಸ್ತಿಪಟುಗಳಿಗೆ ಶಾಸಕ ಆರ್ ವಿ ದೇಶಪಾಂಡೆ ಹಾಗೂ ರವಿ ನಾಯಕ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಇವರು ಅಭಿನಂದನೆಗಳನ್ನು ತಿಳಿಸಿದ್ದಾರೆ.