ಸುದ್ದಿ ಕನ್ನಡ ವಾರ್ತೆ
ಶಿರಸಿ : ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಭೈರುಂಬೆ, ಸೋಂದಾ ಮತ್ತು ತಾರಗೋಡು (ಸದಾಶಿವಳ್ಳಿ ) ಗ್ರಾಮ ಪಂಚಾಯಿತಿಗಳ ಸಹಕಾರದಲ್ಲಿ *ಸ್ವರ್ಣವಲ್ಲೀ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ , ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರಿಂದ ಶಿವರಾತ್ರಿಯ ದಿನ ಸಂಜೆ 4:30 ಗಂಟೆಗೆ ಸಹಸ್ರಲಿಂಗ ಕ್ಷೇತ್ರದಲ್ಲಿ ನದಿ ಪೂಜೆ ಮತ್ತು ಗಂಗಾರತಿ ಕಾರ್ಯಕ್ರಮ* ವನ್ನು ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ಹುಳಗೋಳ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಭೈರುಂಬೆ ಮಂಡಲದ ಅಂಗ ಸಂಘಟನೆ ಶಾಲ್ಮಲಾ ಕಲಿ ಸಂಘಟಿಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಾ ಲ್ಮಲಾ ಕಲಿಯ ಗೌರವ ಸಂಚಾಲಕ ಆರ್ ಎಸ್ ಹೆಗಡೆ ಬೈರುಂಬೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಗಣ್ಯರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಭೈರುಂಬೆ ತಾರಗೋಡ , ಸೊಂದಾ ಗ್ರಾ ಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ಪ್ರಮುಖರು,ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
