Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ವಿಧ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ,ಪಾಲಕರ ಆರ್ಥಿಕ ಪರಿಸ್ಥಿತಿಯನ್ನು ಅರಿತು ಬೇಡಿಕೆಗಳನ್ನು ಸಲ್ಲಿಸಬೇಕು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರವೂ ದೊಡ್ಡದಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾಮತ ಹೇಳಿದರು.

Banner Ad

ಅವರು ಶನಿವಾರ ತಾಲ್ಲೂಕಿನ ಕುಂಬಾರವಾಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿಧ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿತು ತಂದೆ ತಾಯಿಯರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು,ನೌಕರಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಹೇಳಿದರು.
ಪತ್ರಕರ್ತ ಉಪನ್ಯಾಸಕ ಜ್ಞಾನೇಶ್ವರ ದೇಸಾಯಿ ಮಾತನಾಡಿ ವಿಧ್ಯಾರ್ಥಿಗಳು ತಮ್ಮ ತಮ್ಮ ಸಾಮರ್ಥ್ಯ, ಆಸಕ್ತಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ಉನ್ನತ ವ್ಯಾಸಂಗದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು,ಕೇವಲ ಸರ್ಕಾರಿ ನೌಕರಿಗಳ ಅವಲಂಬಿತರಾಗದೆ ಸ್ವ ಉದ್ಯೋಗಳ ತರಬೇತಿ ಪಡೆದು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಬೇಕು, ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಯೋಜನೆಗಳ, ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪರಶುರಾಮ ಗಿರಿಯಪ್ಪನ್ನವರ, ಇತಿಹಾಸ ಉಪನ್ಯಾಸಕಿ ಸುಮನ ಹಿಚ್ಕಡಕರ್ ಮುಂತಾದವರು ಮಾತನಾಡಿದರು.
ವಿವಿಧ ಕ್ರೀಡೆ, ಸಾಂಸ್ಕೃತಿಕ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕನ್ನಡ ಉಪನ್ಯಾಸಕ ಸುನಿಲ್ ಸೇಟಕರ್ ಸ್ವಾಗತಿಸಿದರು, ವಿಧ್ಯಾರ್ಥಿನಿ ಅಕ್ಷರಾ ಗಾವಡಾ ನಿರೂಪಿಸಿದರು, ಉಪನ್ಯಾಸಕಿ ರೂಪಾ ನಾಯ್ಕ ವಂದಿಸಿದರು.

Banner Ad