ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಜಿಲ್ಲಾ ಘಟಕ ಬೆಳಗಾವಿ ಮತ್ತು ಡಾಕ್ಟರ್ ಬಾಬುರಾವ್ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನ (ರಿ) ರಾಯಭಾಗ ಇವರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ ೨೦೨೬ ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಭವನ ಚನ್ನಮ್ಮ ಸರ್ಕಲ್ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು.
ಕನ್ನಡ ನುಡಿ ವೈಭವ ೨೦೨೬ ರ ರಾಜ್ಯಮಟ್ಟದ ಕರುನಾಡ ಕೋಗಿಲೆ ೨೦೨೬ ಪ್ರಶಸ್ತಿಗೆ ಭಾಜನರಾದ ಪ್ರಮುಖರನ್ನು ವೇದಿಕೆಯ ಮೇಲೆ ಹಾಜರಿದ್ದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಒಂದು ರಾಜ್ಯ ಮಟ್ಟದ ಕರುನಾಡು ಕೋಗಿಲೆ ೨೦೨೬ ರ ಪ್ರಶಸ್ತಿಗೆ ಭಾಜನರಾದವರಲ್ಲಿ ಅಂಕೋಲಾದ ಮಧುರ ಕಂಠದ ಗಾಯಕರಾದ ಶಿಕ್ಷಕ ರಾಮನಾಥ ನಾಯ್ಕ ಸಹ ಒಬ್ಬರು.
ರಾಮನಾಥ ನಾಯ್ಕರು ಉತ್ತಮ ಗಾಯಕರಾಗಿದ್ದು ಈಗಾಗಲೇ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ರಾಜ್ಯ ಮಟ್ಟದ ಕರುನಾಡು ಕಲಾ ರತ್ನ ಪ್ರಶಸ್ತಿ,ರಾಜ್ಯಮಟ್ಟದ ವಿಶ್ವ ಕಲಾ ರತ್ನ ಶ್ರೀ ಸಿ.ಆರ್.ಸಿಂಹ ಪ್ರಶಸ್ತಿ,ರಾಷ್ಟ್ರ ಮಟ್ಟದ ಗಾನ ಕೋಗಿಲೆ ೨೦೨೫ ರ ಪ್ರಶಸ್ತಿ,,ರಾಜ್ಯ ಮಟ್ಟದ ಕನ್ನಡ ಕೋಗಿಲೆ ೨೦೨೫ ರ ಪ್ರಶಸ್ತಿ ಈಗ ರಾಜ್ಯ ಮಟ್ಟದ ಕರುನಾಡು ಕೋಗಿಲೆ ೨೦೨೬ ರ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆದರ್ಶ ಗುಣ ನಡೆಯ ಶಿಕ್ಷರಾದ ಇವರಿಗೆ ಪ್ರಶಸ್ತಿ ಸಿಕ್ಕ ವಿಷಯ ತಿಳಿದು ಆತ್ಮೀಯ ಶಿಕ್ಷಕ ಬಳಗ,ಗೆಳೆಯರು, ಬಂಧುಗಳು ಇನ್ನಷ್ಟು ಪ್ರಶಸ್ತಿ ಸನ್ಮಾನಗಳು ಒಲಿದು ಬರಲಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
