Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಜನತೆಗೆ ಗಮನಾರ್ಹ ಕೊಡುಗೆಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರವು ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಿದ ವಿಕಸಿತ ಭಾರತದ ಪೂರಕವಾದ ಜನಪರ ಬಜೆಟ್ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Banner Ad

ಕೃಷಿ,ರೈಲ್ವೇ,ರಕ್ಷಣಾ,ಆರೋಗ್ಯಕ್ಕೆ ಸಂಬಂಧಿಸಿದ ಕ್ಯಾನ್ಸ‌ರ್ ಹಾಗೂ ಇತರ ಕಾಯಿಲೆಗಳ ಔಷಧಿಗಳು, ಮೊಬೈಲ್ ಮತ್ತಿತರ ದರಗಳ ಇಳಿಕೆ ಶ್ಲಾಘನೀಯ ಕ್ರಮವಾಗಿದೆ. ಮೀನುಗಾರಿಕೆ, ಪಶು ಸಂಗೋಪನೆ, ಗೋಡಂಬಿ ಬೆಳೆಗೆ ಬೆಂಬಲ, ತೆಂಗು ಬೆಳೆಗಾರರಿಗೆ ಉತ್ತೇಜನದ ಲಾಭ ನಮ್ಮ ಜಿಲ್ಲೆಗೂ ಆಗಲಿದೆ. ಪ್ರವಾಸೋದ್ಯಮದ ಕ್ಷೇತ್ರ ಸೇರಿದಂತೆ ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆಯನ್ನು ಒಳಗೊಂಡ
ಅತ್ಯುತ್ತಮ ಬಜೆಟ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಅಭಿನಂದನೆ ಸಲ್ಲಿಸಿದ್ದಾರೆ.

Banner Ad