ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಯುವಕರ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ವಾಗೇಲಿಯಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರಬಾವಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ,ಬಾಮಣೆ ತಂಡವು (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆಯಿತು. ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ನಗರಬಾವಿ ಹಾಗೂ ಬಾಮಣೆ ತಂಡಗಳ ನಡುವಿನ ಪಂದ್ಯದಲ್ಲಿ ನಿಗದಿತ ಒವರ್ ನಲ್ಲಿ ನಗರಬಾವಿ ತಂಡವು ಬಾಮಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.ಬಾಮಣೆ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ (ರನ್ನರ್ ಅಪ್ )ದ್ವಿತೀಯ ಸ್ಥಾನ ಪಡೆಯಿತು. ಬಾಮಣೆ ತಂಡದಲ್ಲಿಯ ಸಂದೇಶ,ದುರ್ಗೆಶ,ರಘುನಾಥ, ಗಜಾನನ,ಸುರೇಂದ್ರ,ಸತೀಶ, ಪ್ರದೀಪ,ಮಹೇಶ,ದಯಾನಂದ, ನಿಲೇಶ,ಪ್ರಕಾಶ,ಗುರುನಾಥ, ರಾಜೇಂದ್ರ,ಅಕ್ಷಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ (ರನ್ನರ್ ಅಪ್) ದ್ವಿತೀಯ ಸ್ಥಾನ ಪಡೆದ ಬಾಮಣೆ ತಂಡದವರಿಗೆ ಊರಿನ ಗ್ರಾಮಸ್ಥರು,ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.
