ಸುದ್ಧಿಕನ್ನಡ ವಾರ್ತೆ
ಗೋಕರ್ಣ: ಗೋಕರ್ಣದ ಓಂ ಕಡಲ ತೀರದಲ್ಲಿ ಗುರುವಾರ ಸಂಜೆ ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ಬಂದ ಪ್ರವಾಸಿಗರು ಮತ್ತು ಅಂಕೋಲಾ ರಾಮನಗುಳಿಯ ಇಬ್ಬರು ಪ್ರವಾಸಿಗರ ನಡುವೆ ಜಟಾಪಟಿ ಸಂಭವಿಸಿದೆ.

ಈ ಘಟನೆಯಲ್ಲಿ ಅಂಕೋಲಾ ರಾಮನಗುಳಿಯ ಗಣೇಶ ರಾಥೋಡ್ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು, ಕೂಡಲೆ ಅಂಬುಲೆನ್ಸ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮಾರಾಮಾರಿಗೆ ನಿಖರ ಕಾರಣ ತಿಳಿದುಬಂದಿಲ್ಲ.