ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಶ್ರೀಮತಿ ಪಾರ್ವತಿ ಮತ್ತು ಶ್ರೀ ಗಜಾನನ ಹೆಗಡೆ ಯಲ್ಲಾರಗದ್ದೆ ರವರ ಪುತ್ರ ಸತ್ಯನಾರಾಯಣ ಮತ್ತು ಶ್ರೀಮತಿ ಪಾರ್ವತಿ ಮತ್ತು ಶ್ರೀ ನಾಗರಾಜ ಹೆಗಡೆ ಉಮ್ಮಚಗಿ ರವರ ಸುಪುತ್ರಿ ಶ್ರೀಕಲಾ ರವರ ವಿವಾಹವು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆನಗೋಡಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಫೆಬ್ರುವರಿ 21 ರಂದು ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಈ ವಿವಾಹ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಬಂಧುಮಿತ್ರರು ಸಾಕ್ಷಿಯಾದರು.
ಈ ನವಜೋಡಿಗೆ ಸುದ್ಧಿಕನ್ನಡ ವಾಹಿನಿ ಬಳಗ ಅಭಿನಂದನೆ ಸಲ್ಲಿಸುತ್ತದೆ.