ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಕಂಚನಳ್ಳಿಯ (ಅಚ್ಚೇಸರ) ಉಮೇಶ್ ಗೋಪಾಲ್ ಭಾಗ್ವತ್ ರವರ ಮನೆಯ ಬಾಗಿಲಿಗೆ ದೊಡ್ಡ ಚಿರತೆಯೊಂದು ಬಂದು ನಾಯಿಯನ್ನು ಹೊತ್ತೊಯ್ಡ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಕಂಡು ಮನೆಯವರೆಲ್ಲ ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ಬೆಳಗಿನ ಜಾವ 4. 40 ರ ಸುಮಾರು ಈ ಘಟನೆ ನಡೆದಿದೆ. (The incident where a leopard came and carried away the dog was captured on the CCTV camera).
ಬೆಳಗಿನ ಜಾವ ಆಗಮಿಸಿದ ಚಿರತೆ ಕಂಚನಳ್ಳಿ ಉಮೇಶ್ ಭಾಗ್ವತ್ ರವರ ಮನೆಯ ಸುತ್ತಮುತ್ತ ರಾಜಾರೋಷವಾಗಿ ಚಿರತೆ ಸುತ್ತಾಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಮೇಶ್ ಭಾಗ್ವತ್ ರವರು ಯಲ್ಲಾಪುರ ವಿಕಾಸ ಅರ್ಬನ್ ಕೊ-ಅಪ್ ಬ್ಯಾಂಕ್ ನ ಎಂ.ಡಿ ಆಗಿದ್ದಾರೆ.
ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಉಮೇಶ್ ಭಾಗ್ವತ್ ರವರ ತಂದೆ ಗೋಪಾಲ್ ಭಾಗ್ವತ್ ಪ್ರತಿಕ್ರಿಯೆ ನೀಡಿ-ಚಿರತೆಯು ತನ್ನ ನೆರಳನ್ನೇ ಕಂಡು ಹೆದರುತ್ತದೆ. ನಮ್ಮ ಮನೆಯ ಮುಂದೆ ಲೈಟ್ ಹಾಕಿ ಇಟ್ಟಿದ್ದರಿಂದ ಚಿರತೆ ಮನೆಯ ಬಾಗಿಲಲ್ಲಿ ಬರುವಾಗ ತನ್ನ ನೆರಳನ್ನೇ ಕಂಡು ಬೆಚ್ಚಿ ಬಿದ್ದಿದೆ. ನಮ್ಮ ಮನೆ ನಾಯಿ ಹೆದರಿ ಓಡುವಾಗ ಚಿರತೆ ಕೂಡ ತನ್ನ ನೆರಳನ್ನೇ ಕಂಡು ಓಡುವಾಗ ನಾಯಿ ಮತ್ತು ಚಿರತೆ ಮುಖಾಮುಖಿಯಾಗಿ ಚಿರತೆ ನಾಯಿಯನ್ನು ಹಿಡಿದಿದೆ ಎಂಬ ಮಾಹಿತಿ ನೀಡಿದರು.
ಕಳೆದ ಕೆಲ ದಿನಗಳ ಹಿಂದೆ ಯಲ್ಲಾಪುರದ ಉಪಳೇಶ್ವರ ಭಾಗದಲ್ಲಿ ವ್ಯಕ್ತಿಯೋರ್ವರ ಮೇಲೆ ಕರಡಿ ಧಾಳಿ ನಡೆದಿತ್ತು. (A few days ago, a person was attacked by a bear in Upleshwar area of Yallapur) ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಹುಲಿ ಮತ್ತು ಚಿರತೆ ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರ ಮನೆಗೂ ಚಿರತೆ ಬಂದಿತ್ತು. ಯಲ್ಲಾಪುರದ ಬಿಸಗೋಡ ಭಾಗದಲ್ಲಿ ಕೂಡ ಕಪ್ಪು ಹುಲಿ ಆತಂಕ ಹೆಚ್ಚಾಗಿದೆ. ಹುಲಿ ಮತ್ತು ಚಿರತೆ ಓಡಾಟದಿಂದ ಜನ ಕಂಗಾಲಾಗಿದ್ದಾರೆ.(People are disturbed by tigers and leopards.).