ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಸಹನೆಯೇ ಭಗವಧ್ಗೀತೆಯ ಮೂಲ ಆಶಯ. ತ್ಯಾಗವೇ ಭಗವಧ್ಗೀತೆಯ ಮುಖ್ಯ ವುಷಯ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ಸಹನೆಯೇ ಭಗವಧ್ಘೀತೆಯ ಮುಖ್ಯ ವಿಷಯ ಎಂದು ಸೊಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಯಲ್ಲಾಪುರ ತಾಲೂಕಿನ ಹುಲ್ಲೋರಮನೆ ದೇವಸ್ಥಾನದ ಆವಾರದಲ್ಲಿ ಶನಿವಾರ ಮಧ್ಯಾನ್ಹ ಆಯೋಜಿಸಿದ್ದ ಭಗವಧ್ಗೀತಾ ಅಭಿಯಾನದಮಹಾಸಮರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕರ್ಮಯೋಗ,ಭಕ್ತಿಯೋಗ, ಧ್ಯಾನಯೋಗ ಇವೆಲ್ಲವೂ ತಾಳ್ಮೆಯ ಅಭ್ಯಾಸವಾಗಿದೆ. ಭಗವಧ್ಗೀತೆಯಿಂದ ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀಗಳು ನುಡಿದರು.
ಶ್ರೀಕೃಷ್ಣನಿಂದ ನೇರವಾಗಿ ಭಗವಧ್ಗೀತೆ ಕೇಳಿಸಿಕೊಂಡವನು ಅರ್ಜುನ ಮಾತ್ರವಲ್ಲ. ಅರ್ಜುನನ ರಥದ ಮೇಲೆ ಕುಳಿತಿದ್ದ ಆಂಜನೇಯ ಸಹ ಕೃಷ್ಣನ ಬಾಯಿಂದ ಹೊರಬಂದ ಭಗವಧ್ಗೀತೆಯನ್ನು ಕೇಳಿಸಿಕೊಂಡಿದ್ದಾನೆ. ಹುಲ್ಲೋರಮನೆ ಕ್ಷೇತ್ರದಲ್ಲಿ ಜಾಗೃತವಾದ ಆಂಜನೇಯನಿದ್ದಾನೆ. ಮರದಿಂದ ಮರಕ್ಕೆ ಮಂಗಗಳು ಹಾರುವುದು ಸಾಮಾನ್ಯ. ಆದರೆ ನಾವು ಬರುವಾಗ ಮರದ ಮೇಲಿದ್ದ ಕೋತಿ ಎರಡು ಮೂರು ಸಲ ರೆಂಬೆಕೊಂಬೆಗಳನ್ನು ಕುಣಿಸಿದ್ದು ವಿಶೇಷ ಎಂದು ಸ್ವರ್ಣವಲ್ಲೀ ಶ್ರೀಗಳು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಿದ್ಧಾಪುರದ ರಾಜಾರಾಮ ಚೈತನ್ಯ ಆಶ್ರಮದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ರವರು ಆಶೀರ್ವಚನ ನೀಡಿದರು. ನೆಲೆಮಾವು ಮಠದ ಮಾಧವಾನಂದ ಭಾರತಿ ಶ್ರೀಗಳು ಆಶೀರ್ವಚನ ನೀಡಿದರು. ಭಗವಧ್ಗೀತೆ ಅಭಿಯಾನದ ಜಿಲ್ಲಾಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಕೆಕೆ ಬೋಡೆ ವಿದ್ಯಾರ್ಥಿಗಳಿಗೆ ಭಗವಧ್ಗೀತೆ ಅರಿವು ಮೂಡಿಸುವುದಕ್ಕಾಗಿ ಎಲ್ಲಡೆ ಸ್ಫರ್ಧೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದರು. ಅಭಿಯಾನದ ತಾಲೂಕಾಧ್ಯಕ್ಷ ಜಿಎನ್ ಭಟ್ ತಟ್ಟೀಗದ್ಧೆ ರವರು ಹೊರತಂದ ಸುಜ್ಞಾನ ವಾಹಿನಿ ವಿಶೇಷ ಸಂಚಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.