ಸುದ್ಧಿಕನ್ನಡ ವಾರ್ತೆ
ಶಿರಸಿ: ಶನಿವಾರ ಅವರು ನಗರದ ಮೋಡರ್ನ ಎಜ್ಯುಕೇಶನ್ ಸೊಸೈಟಿಯ ಚೈತನ್ಯ ಪಿಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ‌ ಸಮಾರಂಭದಲ್ಲಿ ಆರ್.ವಿ.ದೇಶಪಾಂಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾತಿಗೆ ಚಟಾಕಿ ಹಾರಿಸಿ ನೆರೆದಿದ್ದ ಪ್ರೇಕ್ಷಕರನ್ನು, ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದ ಘಟನೆ‌ ನಡೆಯಿತು‌.
ಸಂಸದೀಯ ರಾಜ್ಯ ಭಾಷಾ  ಸಮಿತಿ ಸದಸ್ಯರೂ ಆದ ಸಂಸದ ಕಾಗೇರಿ ಅವರು ಗಣೇಶೋತ್ಸವ, ದೇಶ ಮುಖ್ಯ, ಹಿಂದಿ ಭಾಷಾ, ಮಾತೃ ಭಾಷೆ, ನಮ್ಮ ರಾಷ್ಟ್ರದ ಬಗ್ಗೆ ಸದಾ ಜಾಗೃತಿ ಕುರಿತು ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಇದ್ದ  ಆರ್.ವಿ.ದೇಶಪಾಂಡೆ ಅವರು, ಕಾಗೇರಿ ಅವರ ಭಾಷಣ ಬದಲಾಗಿದೆ ಎಂದು ಮಾತು ಆರಂಭಿಸಿದರು.
ಅವರೀಗ ‌ಸಂಸದರು. ದೇಶದ ಬಗ್ಗೆ ಮಾತನಾಡುತ್ತಿದ್ದಾರೆ, ಸಂತೋಷ, ಬೆಳದಿದೀರಿ ಎಂದು  ಚಟಾಕಿ ಹಾರಿಸಿದರು!
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು,
ಎಂಇಎಸ್ ಶಿಕ್ಷಣ ಸಂಸ್ಥೆಯ‌ ಅಧ್ಯಕ್ಷ ಜಿ.ಎಂ.ಮುಳಖಂಡ, ನಿತಿನ್ ಕಾಸರಕೋಡ, ಎಂ.ಜಿ.ಹೆಗಡೆ, ಕೆ.ಬಿ.ಲೋಕೇಶ ಹೆಗಡೆ, ಪ್ರಾಚಾರ್ಯ ರಾಘವೇಂದ್ರ ಹೆಗಡೆಕಟ್ಟೆ ಇತರರು ಇದ್ದರು.
ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು.