ಸುದ್ದಿ ಕನ್ನಡ ವಾರ್ತೆ

ಶಿರಸಿ :ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಚಿತ್ರವನ್ನು ಕರುನಾಡ ಚಕ್ರವರ್ತಿ, ನಟ ಡಾ.ಶಿವರಾಜಕುಮಾರ ವೀಕ್ಷಿಸಿದರು.

ಚಿತ್ರ ಮಂದಿರದ ಎದುರು ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹೂವಿಸುರಿಮಳೆ ಗೈದು, ಬೃಹತ್ ಹೂವಿನ ಹಾರ ಹಾಕಿ ಡಾ.ಶಿವರಾಜಕುಮಾರ ಅವರನ್ನು ಸ್ವಾಗತಿಸಿದರು.

ಬಳಿಕ ತಮ್ಮದೇ ಸೂಪರ್ ಹಿಟ್ ಚಿತ್ರವನ್ನು ಶಿವರಾಜಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ, ಗೀತಾ ಶಿವರಾಜಕುಮಾರ್, ಅಶ್ವಿನ್ ಭೀಮಣ್ಣ ಇತರರೊಂದಿಗೆ ಸೇರಿ ವೀಕ್ಷಣೆ ಮಾಡಿದರು.‌
ನೆಚ್ಚಿನ ನಟನನ್ನು ನೋಡಲು ಸಾಕಷ್ಟು ನೂಕುನುಗ್ಗಲು ಉಂಟಾಗಿತ್ತು. ಬಾಲ್ಕನಿಯಲ್ಲಿ ಕುಳಿತು ಶಿವಣ್ಣ ಚಿತ್ರ ವೀಕ್ಷಿಸಿದರು. ಚಿತ್ರಮಂದಿರ ಹೌಸ್ ಫುಲ್ ಆಗಿತ್ತು.