ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಬಾಳಗೀಮನೆ ಗ್ರಾಮ ಆನಗೋಡ ಪಂಚಾಯತದ ಬದನೇಪಾಲ್ ತಿಮ್ಮಣ್ಣ ಭಟ್ ರವರ ಅಡಿಕೆ ತೋಟಕ್ಕೆ ಹಳ್ಳ ಉಕ್ಕಿ ಹರಿದು ಹಾನಿ ಸಂಭವಿಸಿದೆ. ಹಳ್ಳದ ಏರಿ ಒಡೆದು ಭಾರಿ ಪ್ರಮಾಣದಲ್ಲಿ ನೀರು ಉಕ್ಕಿ ಬಂದು ಇವರ ತೋಟ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ಪರಿಹಾರ ಕಲ್ಪಿಸುವಂತೆ ಆಘ್ರಹಿಸಿದ್ದಾರೆ.

ಯಲ್ಲಾಪುರ ತಾಲೂಕಿನಾದ್ಯಂತ ಪ್ರತಿದಿನ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಕೃಷಿ ಕ್ಷೇತ್ರಕ್ಕೆ ಹಾನಿ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಬಾಳಗೀಮನೆ ಗ್ರಾಮದ ಮೋಳೆಮನೆ, ಹರಕನಪಾಲ್ ಭಾಗದಲ್ಲಿಯೂ ಕೂಡ ಭಾರಿ ಮಳೆಗೆ ಹಳ್ಳ ಉಕ್ಕಿ ಅಡಿಕೆ ತೋಟದ ಮೇಲೆಲ್ಲಾ ತುಂಬಿ ಹರಿದ ಘಟನೆ ನಡೆದಿದೆ. ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿ ಅಡಿಕೆ ತೋಟಕ್ಕೆ ಕೊಳೆ ರೋಗದಿಂದ ಅಡಿಕೆ ಶೇ ಅರ್ಧದಷ್ಟು ಉದುರಿ ಹೋಗಿ ಹೆಚ್ಚಿನ ನಷ್ಠವಾಗಿದೆ. ಇದೀಗ ಮತ್ತೆ ಮಳೆ ಆರಂಭವಾಗಿ ಅನಾಹುತ ಸೃಷ್ಠಿಸುತ್ತಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.

                          ಉತ್ತರಕನ್ನದಲ್ಲಿ ಮತ್ತೆ ಮಳೆ ಮುಂದುವರಿಕೆ…!
ಕರ್ನಾಟಕ ರಾಜ್ಯಾದ್ಯಂತ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದ್ದು, ಉತ್ತರಕನ್ನಡ ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ ಘೋಷಿಸಲಾಗಿದೆ.
ಉತ್ತರಕನ್ನಡ, ಬೆಳಗಾವಿ, ಧಾರವಾಡ,ಗದಗ,ಹಾವೇರಿ,ಬಳ್ಳಾರಿ, ವಿಜಯನಗರ,ದಾವಣಗೆರೆ, ಶಿವಮೊಗ್ಗ, ಉಡುಪಿ,ಚಿತ್ರದುರ್ಗ,ತುಮಕೂರು, ಚಿಕ್ಕಬಳ್ಳಾಪುರ, ಹಾಗೂ ಕೋಲಾರ ಜಿಲ್ಲೆಗಳಿಗೆ ಯಲ್ಲೊ ಅಲರ್ಟ ನೀಡಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿದ್ದು ಈಗಾಗಲೇ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗೆ ಕೊಳೆ ರೋಗ ಬಂದು ಹೆಚ್ಚಿನ ಹಾನಿಯಾಗಿದೆ. ಇನ್ನೂ ಮಳೆಯಾದರೆ ಅಡಿಕೆ ಮರಕ್ಕೆ ಕೂಡ ಹಾನಿಯಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.