ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಯಲ್ಲಾಪುರದಿಂದ ಅಂಕೋಲಾ ಬಾಳೆಗುಳಿ  (National Highway 63 from Yallapur to Ankola Baleguli)  ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿದಿನ ಅಪಘಾತ ಸಂಭವಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ ಬಳಗಾರಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ವಸ್ತು ಸಾಗಿಸುತ್ತಿದ್ದ ಲಾರಿ ಹಳ್ಳದ ಪಕ್ಕ ಗಟಾರದಲ್ಲಿ ಶುಕ್ರವಾರ ಉರುಳಿಬಿದ್ಧ ಘಟನೆ ನಡೆದಿದೆ. ವಾಹನ ಸವಾರರನ್ನು ಇಲ್ಲಿ ಜೀವ ಕೈಯ್ಯಲ್ಲಿ ಹಿಡಿದು ಸಾಗುವ ಸ್ಥಿತಿ ಎದುರಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ ಆರತಿಬೈಲ್ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದು,ಲಾರಿ ಜಖಂ ಆಗಿದೆ.( lost control on the Aartibail slope and the lorry was injured).  ಚಾಲಕ ನಿರ್ವಾಹಕ ಅಯಾದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ.ಸ್ವಲ್ಪ ಮುಂದೆ ಐವತ್ತು ಅಡಿ ಕಂದಕದಲ್ಲಿ ಹಳ್ಳವಿದ್ದು, ಲಾರಿ ಈ ಕಂದಕಕ್ಕಿಂತ ಸ್ವಲ್ಪ ಹಿಂದೆ ಬಿದ್ದಿದೆ, ಇದರಿಂದಾಗಿ ಅದೃಷ್ಠವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.

ಆರತಿಬೈಲ್ ಮತ್ತು ಅರಬೈಲ್ ಘಟ್ಟ ಪ್ರದೇಶದಲ್ಲಂತೂ ಪ್ರತಿದಿನ ಅಪಘಾತ ಸರ್ವೇ ಸಾಮಾನ್ಯ ಎಂಬಂತಾಗಿದೆ. ರಸ್ತೆಯಂತೂ ಸಂಪೂರ್ಣ ಹಾಳಾಗಿದ್ದು ಈ ಮಾರ್ಗದಲ್ಲಿ ಓಡಾಟ ನಡೆಸುವ ಬೈಕ್ ಸವಾರರ ಪರಿಸ್ಥಿತಿಯಂತೂ ಹೇಳತೀರದು. ಜನಪ್ರತಿನಿಧಿಗಳು ಮಾತ್ರ ಇತ್ತಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.