ಸುದ್ಧಿಕನ್ನಡ ವಾರ್ತೆ
ಶಿರಸಿ: ತಾಲೂಕಿನ ಸೋಂದಾ ಜೈನ ಮಠದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಏಳನೇ ವರ್ಷದ ಸೋಂದಾ ಇತಿಹಾಸ ಉತ್ಸವದಲ್ಲಿ, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.(During the two-day seventh annual Sonda History Festival, which began on Saturday at the Sonda Jain Mutt in the taluk, the Sode Sadashivaraya award ceremony was held).
ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು, ಸ್ವಾದಿ ಜೈನ ಮಠದ ಜಗದ್ಗುರು ಶ್ರೀಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜೀಗಳು ಸಾನ್ನಿಧ್ಯ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.
ಸೋದೆ ಸದಾಶಿವರಾಯ ಪ್ರಶಸ್ತಿ ಪುರಸ್ಕೃತ ಹಂಪಿ ವಿವಿಯ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ, ಪ್ರದೇಶಿಕ ಚರಿತ್ರೆಯ ಮಹತ್ವವನ್ನು ವಿದ್ವಾಂಸರು ಹೇಳುತ್ತಿದ್ದಾರೆ. ಪ್ರಾದೇಶಿಕ ಚರಿತ್ರೆಯು ಇತಿಹಾಸದಲ್ಲಿ ಒಂದು ಮಹತ್ವದ್ದಾಗಿದೆ. ಜೀವನ ಪ್ರೀತಿ, ಆತ್ಮ ಸ್ಥೈರ್ಯ ಹೆಚ್ಚಿಸುವದು ಪ್ರಾದೇಶಿಕ ಚರಿತ್ರೆ ಕೂಡ ಒಂದು. ಒಂದು ಕಾಲಕ್ಕೆ ಪ್ರದೇಶಿಕ ಚರಿತ್ರೆ ನಿರ್ಲಕ್ಷ್ಯ ಆಗಿತ್ತು. ಚರಿತ್ರೆಕಾರರು ಸಿದ್ದಾಂತ ತಲೆಯಲ್ಲಿ ಇಟ್ಟು ನೋಡ್ತಾ ಇರುವದೂ ಕಾರಣವಾಗಿದೆ ಎಂದರು.
ಪೂರ್ವಾಗ್ರಹ ಚರಿತ್ರೆ ಬಿಟ್ಟು ಈಚೆಗಿನ ದಶಕದಲ್ಲಿ ಪ್ರಾದೇಶಿಕ ಚರಿತ್ರೆ ಕಲಿಸುವಂತೆ ಆಗಬೇಕು. ಅವರ ಸಾಧನೆ ತಿಳಿಸುವ ಕಾರ್ಯ ಆಗಲಿಲ್ಲ. ಪೂರ್ವಾಗ್ರಹ ಇಲ್ಲದ ಚರಿತ್ರೆ ತಿಳಿಸುವ ಕಾರ್ಯ ಆಗಬೇಕು. ಯುವ ಪಡೆ ಮೌಲ್ಯ ಇಲ್ಲದವರು ಮಾದರಿ ವ್ಯಕ್ತಿ ಆಗುತ್ತಿದ್ದಾರೆ ಎಂದರು.
ರಾಜ್ಯ‌ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರವೀಂದ್ರ ದಾಖಪ್ಪ,  ಮಿಥಿಕ್ ಸೊಸೈಟಿ ಉಪಾಧ್ಯಕ್ಷೆ ಡಾ. ವಿ.ಅನುರಾಧಾ,  ಸಂಘಟಕ, ಸಂಶೋಧಕ ಡಾ. ಲಕ್ಷ್ಮೀಶ ಸೋಂದಾ, ಸೋದೆ ಅರಸು ವಂಶಸ್ಥ ಮಧುಲಿಂಗ‌ ನಾಗೇಶರಾಜೇಂದ್ರ ಒಡೆಯರ್,  ಸುರೇಖಾ ಸೂರ್ಯವಂಶಿ, ಕಾರ್ಯಾಧ್ಯಕ್ಷ ರತ್ನಾಕರ ಬಾಡ್ಲಕೊಪ್ಪ, ಹೆಂಜೆ‌ ನಾಯಕ ವಂಶಸ್ಥ ಜಯಾನಂದ ಮೇತ್ರಿ, ವಿ.ಎನ್.ಹೆಗಡೆ ಬೊಮ್ಮನಳ್ಳಿ, ಸುರೇಶ ಹಕ್ಕಿಮನೆ ಇದ್ದರು.ಸರ್ವಾಧ್ಯಕ್ಷತೆವಹಿಸಿದ್ದ ಖ್ಯಾತ ಇತಿಹಾಸತಜ್ಞ ಡಾ. ರಾಜಾರಾಮ ಹೆಗಡೆ ವಹಿಸಿದ್ದರು.
ಇತಿಹಾಸೋತ್ಸವವನ್ನು ಜಾಗೃತ ವೇದಿಕೆ, ಮಿಥಿಕ್ ಸೊಸೈಟಿ, ಪುರಾತತ್ವ ಇಲಾಖೆ, ಪ್ರಶಸ್ತಿ ಪ್ರದಾನ ಸಮಿತಿ, ರಂಗ ಚರಿತ ಜಂಟಿಯಾಗಿ ಸಂಘಟಿಸಿದ್ದವು.