ಸುದ್ಧಿಕನ್ನಡ ವಾರ್ತೆ

Yellapur: ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩  ಅರಬೈಲ್ ಘಟ್ಟದ ತಿರುವಿನಲ್ಲಿ ಸರಕು ತುಂಬಿದ ಲಾರಿಯೊಂದು ಗುರುವಾರ ಬೆಳಗಿನ ಜಾವ ಪಲ್ಟಿ ಬಿದ್ದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ರಸ್ತೆಯಲ್ಲಿ  ಬಿದ್ದ ಹೊಂಡ ಈ ಅಪಘಾತಕ್ಕೆ ಕಾರಣವಾಗಿದೆ.ಲಾರಿ ಸ್ಕಿಡ್ ಆಗಿ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿರುವುದರಿಂದ  ಸಂಚಾರಕ್ಕೆ ತೊಂದರೆಯಾಗಿದೆ.ರಸ್ತೆಯಲ್ಲಿ ವಾಹನಗಳು ಮೂರ್ನಾಲ್ಕು ಕಿ.ಮೀ ದೂರ ಸಾಲುಗಟ್ಟಿ ನಿಂತಿದೆ.ಕ್ರೇನ್ ಸಹಾಯದಿಂದ ಬಿದ್ದ ಲಾರಿ ಎತ್ತುವ ಕಾರ್ಯ ಸಾಗಿದೆ.

 

                            ಸಂಪೂರ್ಣ ಹದಗೆಟ್ಟ ರಸ್ತೆ

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಸಂಪೂರ್ಣ ಹೊಂಡಮಯವಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಅರಬೈಲ್ ಘಟ್ಟದ ಕೆಳಗಿನ ಊರುಗಳ ಜನರು ಕೆಲಸದ ನಿಮಿತ್ತ ಯಲ್ಲಾಪುರಕ್ಕೆ ಪ್ರತಿದಿನ ಓಡಾಟ ನಡೆಸುವುದರಿಂದ ಜೀವ ಕೈಯ್ಯಲ್ಲಿ ಹಿಡಿದು ಈ ಮಾರ್ಗದಲ್ಲಿ ಓಡಾಟ ನಡೆಸುವಂತಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಕಳೆದ ವರ್ಷ ಬೇಸಿಗೆಯಲ್ಲಿ ಈ ಮಾರ್ಗದ ಡಾಂಬರೀಕರಣ ಕಾಂಗಾರಿ ನಡೆಸಿಲ್ಲ.

——————————————————————————————————————————

  Totally bad road

The Arabil Ghat National Highway in Yallapur Taluk of Uttara Kannada District is completely damaged and completely potholed. Due to this, motorists are struggling. People from the towns below the Arabil Ghats travel to Yallapur daily for work, so they take their lives on this route. Although the road has completely deteriorated, asphalting of this route has not been carried out in the summer of last year.