ಸುದ್ಧಿಕನ್ನಡ ವಾರ್ತೆ
ಶಿರಸಿ: ಕೇಂದ್ರ ಸರಕಾರದ ಗೊಂದಲಕಾರಿ ನೀತಿಯಿಂದ ( Due to the confusing policy of the central government)  ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿದೆ ಎಂದು ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು ಆರೋಪಿಸಿದರು.
                           ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಅಡಿಕೆಯ ಕಳ್ಳ ದಾರಿಯಲ್ಲಿ ಬಂದರುಗಳ‌ ಮೂಲಕ ಅಡಿಕೆ ಆಮದಾಗುತ್ತಿದೆ.( BetalNuts are being imported through ports in the nut smuggling route.)ಇದರ ನಿರ್ವಹಣೆಯಲ್ಲಿ ಕೇಂದ್ರ ಸರಕಾರದ ವೈಫಲ್ಯವಾಗಿದೆ. ಅಡಿಕೆ ಬೆಳೆಗಾರ ಕ್ಷೇತ್ರದ ಸಂಸದರು ಒಂದಾಗಿ ಕೇಂದ್ರ ಸರಕಾರದ ‌ಪ್ರಧಾನಿ, ವಿದೇಶಾಂಗ ಸಚಿವರ ಮೂಲಕ ಒತ್ತಡ ತರಬೇಕು. ವಿಶ್ವಗುರು ಸ್ಥಾನದಲ್ಲಿ ಇರುವ ಪ್ರಧಾನಿಗಳು  ಸಾಪ್ಟಾ ಒಪ್ಪಂದ ದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡದಂತೆ ಹಾಕಬೇಕು.  ಹಾಗೂ ಸಂಸದ ಕಾಗೇರಿ ಅವರೂ ಈ ಒಪ್ಪಂದಗಳ ನವೀಕರಣ ವೇಳೆ ಅಡಿಕೆ ಕೈ ಬಿಡಿಸಬೇಕು ಎಂದರು‌.
ಸಾರ್ಕ ಹಾಗೂ ಸಾಸ್ಟಾ  ಒಪ್ಪಂದದ‌ ಅಡಿ ಇಂಡೋನೇಶಿಯಾ, ಮಲೇಶ್ಯಾ, ಥೈಯಲಾಂಡ್ (Under the SAARC and SASTA agreements, Indonesia, Malaysia, Thailand)  ಕಡೆಯಿಂದ ಕಡಿಮೆ ತೆರಿಗೆಯಿಂದ ಅಥವಾ ಕಳ್ಳ ಸಾಗಾಣಿಕೆ ಮೂಲಕವೂ ಬರುತ್ತಿದೆ. ಶೇ.೬೦ ರಷ್ಟು  ಕಳ್ಳ ಸಾಗಾಣಿಕೆ ಹಾಗೂ ಕರ್ತವ್ಯ ಲೋಪದಿಂದ ಬರುತ್ತಿದೆ ಎಂದರು.
                 ಕೇಂದ್ರ ಸರಕಾರದಿಂದ ಅಡಿಕೆ ಬೆಳೆಗಾರರ ಹಿತ ಕಾಯಲು, ಬೆಲೆ ಸ್ಥಿರತೆ ಕಾಪಾಡುವಲ್ಲಿ ಹಾಗೂ ಆ ಮೂಲಕ ಆರ್ಥಿಕ ಸ್ಥಿರತೆಗೆ ಸಮಸ್ಯೆ‌ ಉಂಟು ಮಾಡುತ್ತಿದೆ ಎಂದ ಅವರು, ಸಾರ್ಕ ಒಪ್ಪಂದದ ಮೂಲಕ ೧೮ ಸಾವಿರ ಟನ ಗೂ ಅಧಿಕ ಒಳ ಬಂದಿದೆ ಎಂದರು.
ಅಡಿಕೆ ಬೆಳೆಗಳ‌ ನಷ್ಟ ಕೊಳೆ, ರೋಗಗಳಿಗೆ ಪರಿಹಾರ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರಮುಖರಾದ ದೇಶಪಾಂಡೆ, ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಬೆಳೆ ಪರಿಹಾರ ಕೊಡಲಾಗುತ್ತಿದೆ ಎಂದರು.
ದೇಶದ ಅಡಿಕೆ ವಹಿವಾಟು ಪೂರ್ಣವಾದ ಬಳಿಕ ವಿದೇಶಿ ಅಡಿಕೆ ಮಾರಾಟ ಕೂಡ ಸಹಕಾರಿ ಸಂಘಗಳ‌ ಮೂಲಕ ನಡೆಸುವಂತೆ ಆಗಬೇಕು (After the country’s  Betalnut trade is complete, foreign nut sales should also be conducted through cooperative societies) ಎಂದರು.
                        ಈ ವೇಳೆ ಪದಾಧಿಕಾರಿಗಳಾದ ಖಾದರ್ ಆನವಟ್ಟಿ, ಬಸವರಾಜ್ ದೊಎ್ಮನಿ, ಜಗದೀಶ ಗೌಡ, ಗಣೇಶ ದಾವಣಗೆರೆ, ಶ್ರೀನಿವಾಸ ನಾಯ್ಕ, ಶೈಲೇಶ್, ಜಾಫಿ ಪಿಂಟೋ ಇದ್ದರು.