ಸುದ್ಧಿಕನ್ನಡ ವಾರ್ತೆ
ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಂಟಿಯಾಗಿ ನಗರದ ಅರಣ್ಯ ಸಭಾಂಗಣದಲ್ಲಿ ನಡೆಸಲಾದ ಪ್ರಾಥಮಿಕ, ಹಾಗೂ ಪ್ರೌಢಶಾಲಾ ಹಂತದ ಶಟಲ್ ಬ್ಯಾಡ್ಮಿಂಟನ್ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
೧೪ ವರ್ಷದೊಳಗಿನ ಬಾಲಕರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಧಾರವಾಡ ಜಿಲ್ಲೆ, ದ್ವಿತೀಯ ಶಿರಸಿ ಶೈಕ್ಷಣಿಕ ಜಿಲ್ಲೆ, ತೃತೀಯ ಬೆಳಗಾವಿ ಜಿಲ್ಲೆ ಮಕ್ಕಳು ಸಾಧನೆ ಮಾಡಿದರು.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಳಗಾವಿ, ಶಿರಸಿ ದ್ವಿತೀಯ, ಹಾವೇರಿ ತೃತೀಯ ಸ್ಥಾನ ಪಡೆದಿದ್ದಾರೆ.
೧೭ವರ್ಷದೊಳಗಿನ ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಶಿರಸಿ ಪ್ರಥಮ, ಬೆಳಗಾವಿ ದ್ವಿತೀಯ, ಬಾಗಲಕೋಟೆ ತೃತೀಯ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಪ್ರಥಮ, ಧಾರವಾಡ ದ್ವಿತೀಯ ಶಿರಸಿ ತೃತೀಯ ಸ್ಥಾನ ಪಡೆದುಕೊಂಡವು.