ಸುದ್ಧಿಕನ್ನಡ ವಾರ್ತೆ
ಶಿರಸಿ: ಇಲ್ಲಿನ ಲಯನ್ಸ್ ಸಮೂಹ ಶಾಲೆಗಳ ಹಾಗೂ ಡಾಕ್ಟರ್ ಭಾಸ್ಕರ್ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು.ಕಾಲೇಜಿನ ಪ್ರಾಚಾರ್ಯ ಶಶಾಂಕ  ಹೆಗಡೆ ಅವರಿಗೆ ಕರ್ನಾಟಕ ಖಾಸಗಿ ಶಾಲಾ ಶಿಕ್ಷಕರ ಸಂಘ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದೆ. 
ಮೂಲತಃ ತಾಲೂಕಿನ ಸಾಲ್ಕಣಿ ಗ್ರಾಮದ ನೈಗಾರ ಎಲೆಮನೆಯ  ತಿಮ್ಮಯ್ಯ ಹೆಗಡೆ ಹಾಗೂ ಶಶಿಕಲಾ ಹೆಗಡೆ ಅವರ  ಪುತ್ರ.  ಯಕ್ಷಗಾನ ಕಲಾವಿದ, ಕನ್ನಡ, ಮನೋವಿಜ್ಞಾನ ಹಾಗೂ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಶಿಕ್ಷಕರಾಗಿ, ಪ್ರಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ, ಸಂಪನ್ಮೂಲ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಹುಲೇಕಲ್,ನೀರ್ನಳ್ಳಿ,ಬೆಳಗಾವಿ, ಸಾಗರ, ಜಮಖಂಡಿ ಬಾಗಲಕೋಟೆ, ಕೊಪ್ಪಳದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
 ಕಳೆದ ನಾಲ್ಕು ವರ್ಷಗಳಿಂದ ಸಶಿರಸಿ ಲಯನ್ಸ್ ಶಾಲೆಯ ಹಾಗೂ ನೂತನ ಪಿಯು ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆರೋಹಿ ಸಂಸ್ಥೆಯ ಮೂಲಕ ಶಿರಸಿಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸ ವಿದ್ಯಾಲಯ ನಡೆಸುತ್ತಿರು ದೀಪ ಶಶಾಂಕ್ ಹೆಗಡೆ ಇವರ ಪತ್ನಿ.
ರಾಜ್ಯಮಟ್ಟದ ಈ ಪ್ರಶಸ್ತಿಗೆ ಆಯ್ಕೆಯಾದ ಶಶಾಂಕ‌ ಹೆಗಡೆ  ಅವರನ್ನು ಶಿರಸಿ ಲಯನ್ಸ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ, ಶಿರಸಿ ಲಯನ್ಸ  ಸಮೂಹ ಶಾಲೆ  ಹಾಗೂ ಕಾಲೇಜಿನ‌ ಶಿಕ್ಷಕ ಶಿಕ್ಷಕೇತರ ಸಮೂಹ ಅಭಿನಂದಿಸಿದೆ. ೨೮ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.