ಸುದ್ದಿ ಕನ್ನಡ ವಾರ್ತೆ
ಶಿರಸಿ: ದ್ವಿಚಕ್ರ ವಾಹನ ಸವಾರರೊಬ್ಬರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದನ್ನು ಗಮನಿಸಿದ ವೈದ್ಯ ದಂಪತಿಗಳು ತಕ್ಷಣ ಗಾಯಾಳುವನ್ನು ಉಪಚರಿಸಿದ ಘಟನೆ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.
ಕಾರ್ಯ ನಿಮಿತ್ತ ಶಿರಸಿಯಿಂದ ಬೆಳಗಾವಿಗೆ ತೆರಳುತ್ತಿರುವಾಗ ದಾರಿ ಮಧ್ಯೆ ಬೈಕ್ ಸವಾರ ಆಯ ತಪ್ಪಿ ಬಿದ್ದ ವೃದ್ದರೊಬ್ಬರನ್ನು ಕಂಡ ಶಿರಸಿಯ ವೈದ್ಯ ದಂಪತಿಗಳಾದ ಡಾ.ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಶೀಘ್ರ ಚಿಕಿತ್ಸೆಯ ಸೇವೆ ನೀಡಿ ಜೀವ ರಕ್ಷಿಸಿದರು.
ಈ ಘಟನೆ ರವಿವಾರ ಇಳಿಹೊತ್ತಿನಲ್ಲಿ ನಡೆದಿದ್ದು, ಸ್ಥಳೀಯರು ಕೂಡ ವೈದ್ಯರ ಕಾರ್ಯಕ್ಕೆ ಹ್ಯಾಟ್ಸಾಪ್ ಹೇಳಿದ್ದಾರೆ. ವಾಹನದಲ್ಲೇ ತುರ್ತು ಚಿಕಿತ್ಸಾ ಕಿಟ್ ಇಟ್ಟುಕೊಂಡೇ ವೈದ್ಯ ದಂಪತಿಗಳು ತೆರಳುವದು ರೂಢಿಯಲ್ಲಿರುವದರಿಂದ ಔಷಧೋಪಚಾರಕ್ಕೂ ಅನುಕೂಲವಾಯಿತು ಎಂಬುದೂ ಉಲ್ಲೇಖನೀಯ.