ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡದ ಮುಂಡಗೋಡ;ಪಟ್ಟಣದ ಮಾರಿಕಾಂಬಾ ನಗರದ ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಐದು ವರ್ಷದ ಬಾಲಕಿ ಮಯೂರಿ ಸುರೇಶ ಕುಂಬಳೆಪ್ಪನವರ ಹಾವು ಕಡಿದು ಮಂಗಳವಾರ ಮೃತಪಟ್ಟಿದ್ದಾಳೆ.

ಎಂದಿನಂತೆ ಅಂಗನವಾಡಿಗೆ ಹೋಗಿದ್ದ ಮಯೂರಿ, ಮೂತ್ರ ವಿರ್ಜನೆಗೆಂದು ಅಂಗನವಾಡಿಯ ಹಿಂಬದಿಯಲ್ಲಿ ತೆರಳಿದಾಗ ಯಾವುದೋ ಹಾವು ಕಡಿದಿದೆ. ಬಾಲಕಿ ತಕ್ಷಣವೇ ‘ಕಾಲಿಗೆ ಹಾವು ಕಡಿತು ಕಡಿತು’ ಎಂದು ಅಳುತ್ತಾ ಹೊರಗೆ ಬಂದಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಸ್ಥಳೀಯರು ವಿಷ ಏರಿದಂತೆ ಸೆಣಬು ಕಟ್ಟಿಕೊಂಡು ಆಟೋ ದಲ್ಲಿ ಕೂಡಲೇ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾಳೆ. ಬಾಲಕಿ ಮೃತಪಟ್ಟಿರುವುದನ್ನು ಕಿಮ್ಸ್ ವೈದ್ಯರು ದೃಢಪಡಿಸಿದ್ದಾರೆ.

ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ: ಸುರೇಶ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮೃತ ಮಯೂರಿನೇ ಚಿಕ್ಕವಳು. ಬಾಲಕಿಗೆ ಹಾವು ಕಡಿದು ಮೃತಪಟ್ಟಿದ್ದಾಳೆ ಎಂಬ ಸುದ್ದಿ ಕೇಳಿ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸರು ಭೇಟಿ: ವಿಷಯ ತಿಳಿದು ಅಂಗನವಾಡಿ ಕೇಂದ್ರಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಕಾರ್ಯಕರ್ತೆ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಮೃತ ಬಾಲಕಿಯ ಮನೆಗೆ ಭೇಟಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಿಕಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.