ಸುದ್ದಿ ಕನ್ನಡ ವಾರ್ತೆ
ಶಿರಸಿ: ಆಟೋ ಚಾಲಕನ ಪುತ್ರಿ ನಗರದ ಡಾನ್ ಬಸ್ಕೋ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪ್ತಿ ರಥನ ಜೋಗಳೇಕರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೧೯ ಅಂಕ ಪಡೆದು ಸಾಧನೆ ಮಾಡಿದ್ದಾಳೆ.

ಇಲ್ಲಿನ ಗಣೇಶನಗರದ ರಥನ ಜೋಗಳೇಕರ ಮತ್ತು ಧನಲಕ್ಷ್ಮೀ ದಂಪತಿಯ ಪುತ್ರಿಯ ತಂದೆಯು ಸಾಮ್ರಾಟ ಆಟೋ ಸ್ಟಾಂಡ್ ನಲ್ಲಿ ಆಟೋ ಚಾಲಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.

ಪ್ರಾಮಾಣಿಕವಾಗಿ ಆಟೋ ಚಾಲಕ ವೃತ್ತಿ ನಿರ್ವಹಿಸಿ, ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರ ಫಲವಾಗಿ ರಾಜ್ಯಕ್ಕೆ ೭ ರ್ಯಾಂಕ್ ಪಡೆದಿದ್ದಾಳೆ.