ಸುದ್ದಿ ಕನ್ನಡ ವಾರ್ತೆ

ಶಿರಸಿ:ತಾಲೂಕಿನಲ್ಲಿ ನರೇಂದ್ರಮೋದಿಜಿಯವರ ಆಶಯದಂತೆ ಉತ್ತರಕನ್ನಡ ಜಿಲ್ಲೆಯ ಸಂಸದ ಕ್ಷೇತ್ರದ ಯುವಕರಲ್ಲಿ ಕ್ರೀಡಾ ಪ್ರತಿಭೆಯನ್ನು ಉತ್ತೇಜಿಸಲು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದಲ್ಲಿ ಆಯೋಜಿಸಿರುವ ಕ್ರೀಡಾ ಉತ್ಸವ ಸಂಸದ ಖೇಲ್ ಮಹೋತ್ಸವ ಶಿರಸಿ ತಾಲೂಕು ಮಟ್ಟದ ಕ್ರೀಡಾಕೂಟ ದಿನಾಂಕ:12 ಜನವರಿ 2026 ರ ಸೋಮವಾರ ಸಮಯ ಬೆಳಿಗ್ಗೆ 8:30 ಗಂಟೆಗೆ ಸ್ಥಳ:ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ,ಶಿರಸಿಯಲ್ಲಿ ನಡೆಯಲಿದೆ.

ಪುರುಷರಿಗಾಗಿ ಗುಂಪು ಆಟಗಳಾದ ಕಬ್ಬಡ್ಡಿ, ವಾಲಿಬಾಲ್,ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀಟರ್ ಓಟ,400 ಮೀಟರ್ ಓಟ,800 ಮೀಟರ್ ಓಟ,ಉದ್ದ ಜಿಗಿತ,ಗುಂಡು ಎಸೆತ ಸ್ಪರ್ಧೆಗಳು ಇವೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ,ಲಿಂಬು ಚಮಚ ಸ್ಪರ್ಧೆಗಳು ನಡೆಯಲಿವೆ ಸರ್ವರೂ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿ ಕೊಂಡಿದ್ದಾರೆ.