ಸುದ್ದಿ ಕನ್ನಡ ವಾರ್ತೆ
ಶಿರಸಿ: ಪ್ರಾಚಾರ್ಯ ಹಾಗೂ ಯಕ್ಷಗಾನ ರಂಗದ ಹಿರಿಯ ಭಾಗವತ ಕೆ.ಪಿ.ಹೆಗಡೆ ಗೊಳಗೋಡ ಅವರಿಗೆ ಹಿಲ್ಲೂರು ಯಕ್ಷ ಮಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಗರದ ಟಿಎಂಎಸ್ ಸಭಾಂಗಣದಲ್ಲಿ ನಡೆದ ಬಳಗ ಮೂರನೇ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಹತ್ತು ಸಾವಿರ ರೂ.ನಗದು ಸಹಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗೌರವ ಸಮ್ಮಾನವನ್ನು ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ, ಪ್ರೋತ್ಸಾಹಕ ಸಮ್ಮಾನವಾಗಿ ಗೋ ಸಂರಕ್ಷಕ ರವಿಚಂದ್ರ ಹನುಮಂತ ಗೌಳಿ ಮರಾಠಿಕೊಪ್ಪ ಅವರಿಗೆ ಪುರಸ್ಕರಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಶಿರಸಿ ಟಿ.ಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಅಧ್ಯಕ್ಷತೆ ವಹಿಸಲಿದ್ದರು. ಅಭ್ಯಾಗತರಾಗಿ ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಜಿ.ಭಾಗ್ವತ, ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಲಯನ್ಸ್ ಎಜ್ಯುಕೇಶನ್ ಸೊಟೈಟಿ ಅಧ್ಯಕ್ಷ ಪ್ರಭಾಕರ ಹೆಗಡೆ, ಗಾಯಕ ರವಿ ಮುರೂರು, ಹಿಲ್ಲೂರು ರಾಮಕೃಷ್ಣ, ರಮ್ಯಾ ರಾಮಕೃಷ್ಣ, ನಾಗರಾಜ ಜೋಶಿ, ಗುರು ಧೋರಣಗಿರಿ ಇತರರು ಇದ್ದರು. ಅಭಿನಂದನಾ ನುಡಿಯನ್ನು ಪ್ರಸಂಗಕರ್ತ ಪ್ರೋ.ಪವನ ಕಿರಣಕರೆ ಮಾಡಿದರು.