ಸುದ್ದಿ ಕನ್ನಡ ವಾರ್ತೆ
ಯಲಾಪುರ: ತಾಲೂಕಿನಲ್ಲಿ ಹಾಡುಹಗಲೇ ನಮ್ಮ ಹಿಂದೂ ಸಮುದಾಯದ ರಂಜಿತಾ ಎಂಬ ಮಹಿಳೆಯೋರ್ವಳನ್ನು ಕಾಳಮ್ಮ ನಗರದ ರಫೀಕ್ ಯಳ್ಳೂರ್ ಎಂಬ ಹೆಸರಿನ ಮುಸ್ಲಿಂ ಯುವಕನೋರ್ವ ಚೂರಿಯಿಂದ ಕತ್ತು ಕೊಯ್ದು, ಕೊಲೆಗೈದಿರುವುದು ಅತ್ಯಂತ ಬರ್ಬರ ಕೃತ್ಯವಾಗಿದೆ. ಇದನ್ನು ಖಡಾಖಂಡಿತವಾಗಿ ವಿರೋಧಿಸುತ್ತೇನೆ, ಈ ಕೂಡಲೇ ಪೋಲೀಸರು ಆರೋಪಿಯನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಯಕ್ತಿಕ ಕಾರಣಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡುವ ಮಟ್ಟಿಗೆ ಮತಾಂಧರು ಮುಂದುವರೆದಿರುವುದು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಎಂಬ ಸಂಶಯ ಬರುತ್ತಿದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಎಂಬ ಯುವತಿಯ ಹತ್ಯೆಗೈದ ಮತಾಂಧನನ್ನು ಗಲ್ಲಿಗೇರಿಸಿದ್ದರೆ ಆಗ ಭಯ ಮೂಡುತ್ತಿತ್ತು. ಈ ಸರಕಾರದಲ್ಲಿ ಸಾರ್ವಜನಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮತಾಂಧರಿಗೆ ಬಿರಿಯಾನಿ ಊಟ ಹಾಕುವ ಮನಸ್ಥಿತಿಯ ಈ ಸರಕಾರದಲ್ಲಿ ಕಾನೂನಿನ ಭಯವೇ ಇಲ್ಲದಂತಾಗಿರುವುದು ಈ ವ್ಯವಸ್ಥೆಯ ದುಸ್ಥಿತಿಯಾಗಿದೆ. ಹಿಂದೂ ಸಮಾಜ ಇಂತಹ ಘೋರ ಕೃತ್ಯಕ್ಕೆ ಉತ್ತರ ಕೊಡಲು ಸಶಕ್ತವಾಗಿದೆ. ಈ ಕೂಡಲೇ ಆರೋಪಿಯನ್ನು ಬಂಧಿಸಿ, ಮೃತ ಯುವತಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
