ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಇಂದು ಜೋಯಿಡಾ ದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ರಚಿಸಲ್ಪಟ್ಟ ಸ್ವಸಹಾಯ ಸಂಘದ ಸದಸ್ಯರಿಗೆ ಒಂದು ದಿನದ ಸಿಬಿಡಿ ಆರ್ಸೆಟ್ ಬಜಾರ್ ಎಂಬ ಮಾರುಕಟ್ಟೆಯನ್ನು ಒದಗಿಸಿ ಕೊಡಲಾಯಿತು.

ಈ ಮಾರುಕಟ್ಟೆಯಲ್ಲಿ ಹಲವಾರು ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ತಿಂಡಿ ಪದಾರ್ಥಗಳಾದ ಲಾಡು, ಚಿಪ್ಸ್, ರೊಟ್ಟಿ, ಮಸಾಲಾ ಪದಾರ್ಥ , ಕುಂಬಾರಿಕೆಯ ಮಡಿಕೆ ಕೆಸು ಮೂಡ್ಲಿ , ಬೆತ್ತದ ತಯಾರಿಕೆ ಮರ ಹಲಸಿನ ಪಾಪಡ್ ಇತ್ಯಾದಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಿದರು ಒಟ್ಟು 10580 ರೂಪಾಯಿಗಳ ಆದಾಯ ವನ್ನು ಸ್ವ ಸಹಾಯ ಸಂಘದ ಸದಸ್ಯರು ಗಳಿಸಿರುತ್ತಾರೆ. ಈ ಮಾರುಕಟ್ಟೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.