ಸುದ್ದಿ ಕನ್ನಡ ವಾರ್ತೆ
. ಯಲ್ಲಾಪುರ:ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ
ಶಾಲೆ ಗೋಳಿಗದ್ದೆ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಜೂಜಿನಬೈಲ್ ಇವರು ಪ್ರತ್ಯೇಕವಾಗಿ ಆಯೋಜಿಸಿದ ವಾರ್ಷೀಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಭಾಗಿಯಾಗಿ ದೀಪ ಬೆಳಗಿಸುವುದರ ಮೂಲಕ ಸಭೆಯನ್ನು ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಎರಡು ಶಾಲೆಗಳ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು..
ಎರಡೂ ಶಾಲೆಗಳಲ್ಲಿ ಶಿಕ್ಷಕರ,ಪಾಲಕರ ಹಾಗೂ ಶಿಕ್ಷಕ ಪ್ರೇಮಿಗಳ ಸಹಾಯ ಸಹಕಾರದಿಂದ ಉತ್ತಮ ಅಭಿವೃದ್ಧಿ ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇಖಾ ನಾಯ್ಕರವರು ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ನೌಕರ ಸಂಘದ ಅಧ್ಯಕ್ಷರಾದ ಸಂಜೀವ ಕುಮಾರ ಹೊಸ್ಕೆರಿರವರು ,ಶಿಕ್ಷಣ ಇಲಾಖೆಯ ಬಿ.ಆರ್.ಪಿ ಮತ್ತು ಸಿ.ಆರ್.ಪಿ ಗಳು ,ಶಾಲೆಯ ಶಿಕ್ಷಕ ವೃಂದದವರು,ಪಾಲಕ ,ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
