ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕಳೆದ ಎಂಟು ವರ್ಷಗಳಿಂದ ಸತತವಾಗಿ ಸಂಜೀವನಿ ಟ್ರಸ್ಟ್ ವತಿಯಿಂದ ಪಕ್ಷಿ ವೀಕ್ಷಣೆಯ ಕಾರ್ಯಕ್ರಮ, ಸಂಜೀವನಿ ಬರ್ಡಿಂಗ್ ಟ್ರೇಲ್ ಆಯೋಜಿಸಲಾಗುತ್ತಿದೆ.
ಈ ವರ್ಷವೂ ಕುಂಭಾರವಾಡಾದ ಕಾಟೇಲ್ ಗ್ರಾಮದಲ್ಲಿ ಅತಿ ಉತ್ಸಾಹದಿಂದ ನಡೆಯಿತು. ಬಿಜಿವಿಎಸ್ ಕಾಲೇಜು, ಮೋರಾರಜಿ ವಸತಿ ಶಾಲೆ ಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ ಸುಮಾರು 75 ಜನ ಪಕ್ಷಿ ವೀಕ್ಷಣೆ ಮಾಡಿದರು. ಸುಮಾರು 45 ಜಾತಿಯ ಪಕ್ಷಿಗಳು ನೋಡುವ ಭಾಗ್ಯ ಎಲ್ಲರಿಗೂ ಸಿಕ್ಕಿತು.
ಜೋಯಡಾ ತಾಲೂಕು ಒಂದು ಅಘೋಷಿತ ಪಕ್ಷಿ ಧಾಮ. ಈ ವರೆಗೆ ಸುಮಾರು 350 ಜಾತಿಯ ಪಕ್ಷಿ ಗಳು ದಾಖಲು ಆಗಿವೆ. ಜಗತ್ತಿನಲ್ಲಿ ಅಪರೂಪವಾಗುತ್ತಿರುವ ಮತ್ತು ವಿನಾಶದ ಅಂಚಿನಲ್ಲಿರುವ ಅನೇಕ ಪ್ರಭೇದಗಳು (ಇಂಡಿಯನ್ ವಲ್ಚರ್, ಮಲಬಾರ ಪೖಡ್ ಹಾರ್ನಬಿಲ್, ಗ್ರೇಟ್ ಇಂಡಿಯನ್ ಹಾರ್ನಬಿಲ್, ಫಾರೇಸ್ಟ್ ಓಲೇಟ್, ನಿಲಗಿರಿ ಫ್ಲೖಕ್ಯಾಚರ್)ಇಲ್ಲಿ ಕಾಣಸಿಗುತ್ತವೆ.
ರೀವರ್ಟನ್, ಶ್ರೀಲಂಕನ್ ಫ್ರಾಗ್ ಮೌಥ್ ಮುಂತಾದ ಜಗತ್ತಿನ ಅನೇಕ ಪ್ರಭೇದಗಳು ಅನುಕೂಲ ಹವಾಮಾನ ಹಾಗು ಆಹಾರಕ್ಕಾಗಿ ಸ್ಥಾನಾಂತರ ಗೊಳ್ಳುತ್ತವೆ. ವಿಶ್ವ ಪ್ರವಾಸೋದ್ಯಮದಲ್ಲಿ ಒಂದು ವಿಶೇಷ ಆಕರ್ಷಣೆ ಯಾಗಿ ಹೊರಹೊಮ್ಮುತ್ತಿರುವ ಜೋಯಡಾ, ಜಲಕ್ರೀಡೆಯ ಜತೆಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ಕೂಡ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಲಿದೆ. ಅದ್ದರಿಂದ ಇಂಥ ಕಾರ್ಯಕ್ರಮ ಗಳ ಆಯೋಜನೆ ಪ್ರಶಂಸನೀಯ.
ವೖಶಿಷ್ಟ್ಯ್ ಪೂರ್ಣ ವಾದ ಈ ಕಾರ್ಯಕ್ರಮದಲ್ಲಿ ಪೂಣೆಯ ಎಚ್ ವೖ ದೇಸಾಯಿ ಕಾಲೇಜಿನ ಅಧ್ಯಾಪಕರಾದ ಪ್ರಾಜಕ್ತಾ ಡಿಂಬಳೆ, ವಿದ್ಯಾರ್ಥಿಗಳಾದ ಅಭಿಷೇಕ್ ಮಾನೆ, ಒಂಕಾರ್ ಹರಳ, ಋತುಜಾ ಪಾಟೀಲ್ ಪ್ರತೀಕ್ಷಾ ಮಕಾನೆ,ಗೋವಾದ ಚೌಗುಲೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಂದೇಶ ಗಾವಸ್, ಹನುಮಾನ್ ಗಾವಸ್ ಪಕ್ಷಿಪ್ರೇಮಿಗಳಾದ ಪುಣೆಯ ಧನಂಜಯ ಮುಖೆಕರ್, ಧಾರವಾಡದ ಸಂತೋಷ ಇನಾಮದಾರ ಪಕ್ಷಿ ವೀಕ್ಷಣೆ ಯಲ್ಲಿ ಭಾಗವಹಿಸಿದ್ದರು.
ಪಕ್ಷಿ ವೀಕ್ಷಣೆ ಯ ನತರ ವನ ಭೋಜನ ನಡೆಯಿತು.
ಸಂಜೀವನಿ ಸೇವಾ ಟ್ರಸ್ಟ್ ಹಾಗು ಕೖಗಾ ಬರ್ಡರ್ಸ್ ಕಾರ್ಯಕ್ರದ ಸಂಯೋಜನೆ ಮಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಜೀವನಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಸುನೀಲ್ ದೇಸಾಯಿ, ವಿಜಯವಾಣಿ ಪತ್ರಿಕೆಯ ಸ್ಥಾನೀಯ ಸಂಪಾದಕರಾದ ಪ್ರಕಾಶ್ ಶೇಟ್, ಕೖಗಾ ಬರ್ಡರ್ಸ್ ತಂಡದ ದಿನೇಶ ಗಾವಕರ್, ಮೋರಾರಜಿ ವಸತಿಶಾಲೆಯ ಶಿಕ್ಷಕರಾದ ಬಸವರಾಜ
ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ರಶ್ಮಿ ರೇಡಕರ, ಪ್ರಾಂಜಲ್ ರೇವಣಕರ್, ಬಬೀತಾ ಕುಂಭಗಾಳಕರ ಕಾರ್ಯಕ್ರಮದ ಬಗೆಗಿನ ಅನುಭವ ಹಂಚಿಕೊಂಡರು.ಕೊನೆಯಲ್ಲಿ ರವಿ ರೇಡಕರ್ ಮಾತನಾಡುತ್ತ, ಮಾನವನ ಜೀವನದಲ್ಲಿ ಪಕ್ಷಿಗಳ ಮಹತ್ವ, ಪಕ್ಷಿಗಳ ಸಂರಕ್ಷಣೆ ಎಷ್ಟು ಮುಖ್ಯ, ಪಕ್ಷಿ ವೀಕ್ಷಣೆ ಯಲ್ಲಿ ಹೇಗೆ ಕರಿಯರ್ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆದಿತ್ಯ ರೇಡಕರ್ ಪ್ರಾಸ್ತಾವೀಕವಾಗಿ ಮಾತನಾಡಿದರು.
ಕಾಳಿ ಬ್ರಿಗೇಡ್ ನ ಸಮೀರ ಮುಜಾವರ್, ರಾಜೇಂದ್ರ ವೇಟೆ ಪ್ರಭಾಕರ್ ನಾಯ್ಕ್, ವ್ಯಾಪಾರಸ್ಥರ ಸಂಘದ ರಫೀಕ್ ಖಾಜಿ, ಕಾಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷರಾದ ವಿನಯ ದೇಸಾಯಿ, ಕೖಗಾ ಬರ್ಡರ್ಸ್ ತಂಡದ ಹರೀಶ್ ಕೆ, ಪ್ರಶಾಂತ, ಸಂಪತ್, ಅರಣ್ಯ ಇಲಾಖೆಯ ಹನುಮಂತ, ಸಂಜೀವನಿ ಸಿಬ್ಬಂದಿಗಳಾದ ಜಯಂತ ಗಾವಡಾ, ಡಾ. ಗಣೇಶ್, ಶ್ರೀಪಾದ, ನಾಗವೇಣಿ ಉಪಸ್ಥಿತರಿದ್ದರು.
