ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಬಿ ಗೊನ್ಸಾಲಿಸ್ ಅವರನ್ನು ಕುಮಟಾ ತಾಲೂಕಿನ ಎನ್.ಎಸ್.ಎಸ್ ಸೊಸೈಟಿ(ರಿ)ಕಡತೋಕ ಶ್ರೀ ರಾಮನಾಥ ಪ್ರೌಢಶಾಲೆ ಊರಕೇರಿಯಲ್ಲಿ ಶಿಕ್ಷಕರಾಗಿ (1996-97) ಒಂದು ವರ್ಷ ಸೇವೆ ಸಲ್ಲಿಸಿದ್ದು, ದಿನಾಂಕ:27-12-2025 ರ ಶನಿವಾರ ನಡೆದ ರಜತಸಂಭ್ರಮದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಇನ್ನುಳಿದ ಗುರುವೃಂದದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಾಲಿ ಶಾಸಕರಾದ ದಿನಕರ ಶೆಟ್ಟಿ,ಮಾಜಿ ಸಚಿವರಾದ ಶಿವಾನಂದ ನಾಯ್ಕ,ಮಾಜಿ ಶಾಸಕಿಯಾದ ಶಾರದಾ ಶೆಟ್ಟಿ,ಈಶ್ವರ ನಾಯ್ಕ ನಿರ್ದೇಶಕರು,ರೇಖಾ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಲ್ಲಾಪುರ,ಉದಯ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ,ಇನ್ನಿತರ ಗಣ್ಯರು, ಅಧಿಕಾರಿ ವರ್ಗ,ಪ್ರೌಢಶಾಲೆಯ ಸಮಿತಿಯವರು ಶಿಕ್ಷಣ ಪ್ರೇಮಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
