ಸುದ್ದಿ ಕನ್ನಡ ವಾರ್ತೆ
ಜೋಯಿಡಾ ರಾಮನಗರದ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಕಲಾ ಮತ್ತು ವಾಣಿಜ್ಯಮಹಾವಿದ್ಯಾಲಯದಲ್ಲಿಸ್ವಯಂಪ್ರೇರಿ ತ ರಕ್ತದಾನ ಶಿಬಿರವು ಸಂಪನ್ನವಾಯಿತು.

ಈ ಶಿಬಿರವನ್ನು ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ ಸಿಟಿ (ರಿ) ಹಳಿಯಾಳ ಉಪಶಾಖೆ ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಆರೋಗ್ಯ ಕೇಂದ್ರ ರಾಮನಗರ, ಕೆ.ಎಲ್‌.ಇ. ಸಂಸ್ಥೆಯ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಬಿ.ಜಿ.ವಿ.ಎಸ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಮಹಾವಿದ್ಯಾಲಯದಪ್ರಾಂಶುಪಾಲ ಪಿ.ಎಸ್. ಪರಬ್ ಅವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕೆ.ಎಲ್‌.ಇ. ಸಂಶೋಧನಾ ಕೇಂದ್ರ ಬೆಳಗಾವಿಯ ಶ್ರೀ ವೈ.ವಿ. ವೀರಗಿ, ರಾಮನಗರ ಸಿಡಿಬಿಆರ್ ಶೆಟ್ಟಿ ಅವರ ಪ್ರಾಂತೀಯ ಅಧಿಕಾರಿ ಮನೋಹರ್ ಸಿ., ಮಹಾವಿದ್ಯಾಲಯದ ಉಪನ್ಯಾಸಕರು, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎಂ.ಎಸ್. ಕಮ್ಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮ ಯಶಸ್ವಿಯಾಗಲು ರಾಮನಗರ ಪೊಲೀಸ್ ಇಲಾಖೆ, ಸ್ವಸಹಾಯ ಸಂಘ ರಾಮನಗರ, ಮಹಾವಿದ್ಯಾಲಯದ ಉಪನ್ಯಾಸಕರು, ಯುವಕ-ಯುವತಿಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಎಲ್ಲಾ ರಕ್ತದಾನಿಗಳು ಸಹಕಾರ ನೀಡಿದರು. ಒಟ್ಟು 20 ರಕ್ತದಾನಿಗಳು ರಕ್ತದಾನ ಮಾಡಿದರು. ರಾಮನಗರ ಸರ್ಕಾರಿ ಆಸ್ಪತ್ರೆ ಹಾಗೂ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಈ ಶಿಬಿರಕ್ಕೆ ಅಮೂಲ್ಯ ಸಹಕಾರ ನೀಡಿದರು. ಕಾರ್ಯಕ್ರಮದ ಆರಂಭ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ನಡೆಯಿತು.