ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಣಶಿಯಲ್ಲಿ ದಿನಾಂಕ: 25-12-2025 ರ ಗುರುವಾರ ಸಿಕ್ಸ್ ಬ್ರದರ್ಸ್ ಅಣಶಿಯವರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪಂದ್ಯಾವಳಿಯ ಉದ್ಘಾಟನೆಯನ್ನು ಅಣಶಿ ವಲಯ ಅರಣ್ಯಾಧಿಕಾರಿಗಳಾದ ಗಣರಾಜ ಪಟಗಾರರವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ದತ್ತಾರಾಮ ಮಸ್ಕಾರ ದೇವಸ್ಥಾನದ ಅಧ್ಯಕ್ಷರು,ಸಚಿನ್ ನಾಯ್ಕ ಉಪವಲಯರಣ್ಯಾಧಿಕಾರಿ, ಸುಧಾಕರ ಊರಿನ ಮಿರಾಶಿ, ರಾಮಚಂದ್ರ, ಉದಯ, ಮಹಾಬಳೇಶ್ವರ ಕಾಜುಗಾರ, ನಾರಾಯಣ ಮಸ್ಕಾರ ಪಂದ್ಯಾವಳಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

15 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಕೊನೆಯ ಪೈನಲ್ ಪಂದ್ಯದಲ್ಲಿ ಕದ್ರಾ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದರೆ,ಸಿಕ್ಸ್ ಬ್ರದರ್ಸ್ ಅಣಶಿ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆಯಿತು. ಸಮಾರೋಪ ಹಾಗೂ ಬಹುಮಾನ ವಿತರಣೆಯ ಸಮಾರಂಭದಲ್ಲಿ ಅರುಣ ನಾಯ್ಕ ಅಣಶಿ ಗ್ರಾಮ ಪಂಚಾಯತ ಉಪಾಧ್ಯಕ್ಷರು, ಗಜಾನನ ಕಾಜುಗಾರ, ಮಹಾಬಳೇಶ್ವರ ಕಾಜುಗಾರ, ರಾಮಚಂದ್ರ ಕಾಜುಗಾರ ಉಪಸ್ಥಿತರಿದ್ದರು.ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಕ್ರೀಡಾ ಮನೋಭಾವನೆಯಿಂದ ಉತ್ತಮ ಆಟದ ಪ್ರದರ್ಶನ ನೀಡಿ ಕ್ರೀಡಾಕೂಟ ಯಶಸ್ವಿಗೊಳಿಸದ್ದಕ್ಕೆ ಜೊತೆಗೆ ಪಂದ್ಯಾವಳಿಯನ್ನು ನಡೆಸಲು ಸಹಾಯ,ಸಹಕಾರ ನೀಡಿದ ಎಲ್ಲರಿಗೂ ಸಂಘಟಕರು ಅಭಿನಂದನೆಗಳನ್ನು ಸಲ್ಲಿಸಿದರು.