ಸುದ್ದಿ ಕನ್ನಡ ವಾರ್ತೆ

ಜೊಯಿಡಾ; ತಾಲೂಕಿನ ಕಾಳಿ ಹುಲಿ ಯೋಜನೆಯ ವ್ಯಾಪ್ತಿಗೆ ಬರುವ ಮೂಲನಿವಾಸಿಗಳಿಗೆ ನೀಡುವ ತೊಂದರೆ ಮತ್ತು ಕೊಟ್ಯಾಂತರ ರೂಪಾಯಿ ಅವ್ಯವಹಾರ ತನಿಖೆ ಒತ್ತಾಯಿಸಿ ಹೋರಾಟ ನಡೆದಿತ್ತು. ಹದಿನೈದು ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಹೇಳಲಾಗಿತ್ತು . ಎರಡುವರೆ ತಿಂಗಳು ಕಳೆದರೂ ಸಭೆ ಮಾಡಲು ವಿಫಲವಾದ ಅಧಿಕಾರಿಗಳ ವಿರುದ್ಧ ಹೋರಾಟ ಸಜ್ಜಾಗುತ್ತಿದ್ದಾರೆ.

ಸ್ಥಳೀಯರು ಅಕ್ಟೋಬರ್ 8 ರಂದು ಕುಂಬಾರ ವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು. ಅರಣ್ಯ ಇಲಾಖೆ ಸ್ಥಳಿಯ ಮೂಲ ನಿವಾಸಿಗಳಿಗೆ ತೊಂದರೆ ನೀಡುವುದು ನಿಲ್ಲಿಸಬೇಕು ಮತ್ತು ಅರಣ್ಯ ಇಲಾಖೆಯಲ್ಲಿ 152 ಕೋಟಿ ರೂಪಾಯಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಒತ್ತಾಯಿಸಿದ್ದರು. ಸ್ಥಳಕ್ಕೆ ಬಂದ ತಹಶಿಲ್ದಾರ ಹಾಗೂ ಎಸಿಎಫ್ ಅಣಶಿ ಹದಿನೈದು ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದರಿಂದ ಹೋರಾಟ ಹಿಂದೆ ಪಡೆದಿದ್ದರು.

ಕಳೆದ ಎರಡುವರೆ ತಿಂಗಳಲ್ಲಿ ನಾಲ್ಕು ಸಲ ಪತ್ರ ನೀಡಿ ಮಾತು ನೀಡಿದಂತೆ ಸಭೆ ನಡೆಸಲು ಒತ್ತಾಯಿಸಲಾಗಿತ್ತು. ಆದರೆ ಅಧಿಕಾರಿಗಳು ವಚನ ಪಾಲಿಸಲು ವಿಫಲವಾಗಿದ್ದಾರೆ.

ಸಿ.ಸಿ.ಎಫ್ ಸಭೆ ಕರೆದಿಲ್ಲ.

ನವ್ಹಬಂರ 11 ಅರಣ್ಯ ಅತಿಕ್ರಮಣ ದಾರರ ಸಭೆ ಶಿರಸಿಯಲ್ಲಿ ನಡೆದಾಗ, ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ ಜೊಯಿಡಾದಲ್ಲಿ ಸಭೆ ನಡೆಸುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಸಿ.ಸಿ.ಎಪ್ ರವರು 15 ದಿನದೊಳಗೆ ಜೊಯಿಡಾದಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರು. ಡಿಸೆಂಬರ್ 3 ರಂದು ದಾಂಡೇಲಿ ಯಲ್ಲಿ ಸಭೆ ನಿಗದಿ ಪಡಿಸಿ ಮುಂದೂಡಲಾಗಿತ್ತು. ಡಿಸೆಂಬರ್ 6 ರಂದು ಜೊಯಿಡಾದಲ್ಲಿ ಸಭೆ ನಡೆಸುವಂತೆ ಸಿ.ಸಿ.ಎಫ್ ಶಿರಸಿ ರವರಿಗೆ ಇನ್ನೊಂದು ಪತ್ರ ನೀಡಲಾಗಿತ್ತು. ಡಿಸೆಂಬರ್ 8 ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಳಿ ಹುಲಿ ಯೋಜನೆ ದಾಂಡೇಲಿ ರವರಿಗೆ ಸೂಕ್ತ ಕ್ರಮವಹಿಸಲೂ ಸೂಚಿಸಿದರು ಇಂದಿಗೂ ಜೊಯಿಡಾದಲ್ಲಿ ಸಭೆ ಈನಡೆಸುವ ಯಾವುದೇ ಭರವಸೆ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳು ವಿಶ್ವಾಸ ಕಳೆದುಕೊಂಡಿದ್ದಾರೆ.

ಸಿ.ಸಿ.ಎಪ್ ಅಥವಾ ಜಿಲ್ಲಾಧಿಕಾರಿಗಳ ಸಭೆ ಆಗಲಿ.

ತಾಲೂಕಿನಲ್ಲಿ ಅರಣ್ಯ ವಾಸಿಗಳಿಗೆ ಇಲಾಖೆಯಿಂದ ತೊಂದರೆ ಇದೆ. ಹೋರಾಟದ ಫಲವಾಗಿ ಪರಿಹಾರೋಪಾಯಕ್ಕಾಗಿ ಸಿ.ಸಿ.ಎಫ್ ರವರು ಜೊಯಿಡಾಗೆ ಬಂದು ಖುದ್ದು ಸ್ಥಳಿಯರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು. ಎರಡುವರೆ ತಿಂಗಳಿಂದ ಆಶ್ವಾಸನೆ ಹುಸಿಯಾಗುತ್ತಿದೆ. ಜಿಲ್ಲಾಧಿಕಾರಿಗಳು ಅಥವಾ ಸಿ.ಸಿ.ಎಫ್ ಶಿರಸಿ ಯಾರು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಆದಷ್ಟು ಬೇಗ ಜೊಯಿಡಾದಲ್ಲಿ ಸಭೆ ಸಂಘಟಿಸದಿದ್ದರೆ ಹೋರಾಟ ಅನಿವಾರ್ಯ ಆಗಲಿದೆ.

ಸುಭಾಷ ಗಾವಡಾ
ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ ಉ.ಕ.